ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲ ನೀಡಿದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕೆಲವರು ಕ್ಷಮೆಯಾಚನೆ ವಿಚಾರವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಾವೆಲ್ಲಿಯೂ ಪ್ರತ್ಯೇಕ ಧರ್ಮ ಎಂಬ ಶಬ್ದವನ್ನು ಬಳಸುತ್ತಿಲ್ಲ. 12ನೇ ಶತಮಾನದಲ್ಲಿದ್ದ ಧರ್ಮಕ್ಕೆ ಮಾನ್ಯತೆ ಕೊಡಿ ಅಂತಾ ಕೇಳುತ್ತಿದ್ದೇವೆ. ಬಹಳ ಜನರಿಗೆ ಹೊಸ ಧರ್ಮ ಕಟ್ಟುತ್ತಿದ್ದಾರೆಂಬ ತಪ್ಪು ಕಲ್ಪನೆ ಇದೆ. 12ನೇ ಶತಮಾನದಲ್ಲಿ ಬಸವಣ್ಣ ಅವರಿಂದ ಪ್ರತ್ಯೇಕ ಧರ್ಮ ಸ್ಥಾಪನೆ ಆಗಿದೆ. ಬಸವಣ್ಣನವರು ಸ್ಥಾಪಿಸಿದ ಧರ್ಮಕ್ಕೆ ಮಾನ್ಯತೆ ಕೇಳುತ್ತಿದ್ದೇವೆ ಎಂದರು.
ಕೆಲವರು ಬೇರೆ ಬೇರೆ ಕಾರಣಕ್ಕೆ ಹೇಳಿಕೆ ಕೊಟ್ಟಿರಬಹುದು, ಅದು ಅವರ ವೈಯಕ್ತಿಕ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಧರ್ಮ ಬಂದಾಗ ಲಿಂಗಾಯತ, ಸಮುದಾಯ ಬಂದಾಗ ಪಂಚಮಸಾಲಿ. ಎರಡಕ್ಕೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ.