ಕರ್ನಾಟಕ

karnataka

ETV Bharat / state

ಅಥಣಿಯಲ್ಲಿ ಮಹೇಶ್​ ಕುಮಟಳ್ಳಿ ಪರ ಬಸವಗೌಡ ಪಾಟೀಲ್ ಯತ್ನಾಳ್ ಮತಯಾಚನೆ - Basavagouda Patil Yatnal Election Campaign in favor of Athani BJP Candidate Mahesh Kumatalli v

ಉಪ ಚುನಾವಣೆಯಲ್ಲಿ ಬೆಳಗಾವಿಯ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹೇಶ್​ ಕುಮಟಳ್ಳಿ ಪರ, ಝುಂಜರವಾಡ ಗ್ರಾಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಯಾಚನೆ ಮಾಡಿದರು.

Basanagouda Patil Yatnal Election Campaign in favor of Mahesh Kumatall
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಯಾಚನೆ

By

Published : Dec 1, 2019, 8:26 PM IST

ಅಥಣಿ : ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕದ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದರು, ಆದ್ದರಿಂದ 17 ಜನ ರಾಜೀನಾಮೆ ಕೊಟ್ಟು ಹೊರಬಂದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಯಾಚನೆ

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜೀನಾಮೆ ನೀಡಿದ ಶಾಸಕರು 20-30 ಕೋಟಿ ಹಣ ತೆಗೆದುಕೊಂಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಟಿಕೆಟ್ ಹಂಚಿಕೆ ಗೊಂದಲದಿಂದ ಬಿಜೆಪಿ ಕೇವಲ 104 ಸ್ಥಾನ ಪಡೆಯಿತು. ಆದ್ದರಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗೋಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಒಳ ಜಗಳದಿಂದ ಕರ್ನಾಟಕ ಜನತೆ ಬೇಸತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೇವಲ 4 ಜಿಲ್ಲೆಯ ಮುಖ್ಯಮಂತ್ರಿ ಆಗಿದ್ದರು, ರೇವಣ್ಣ ತಮ್ಮ ಕ್ಷೇತ್ರಕ್ಕೆ 3.5 ಕೋಟಿ ಅನುದಾನ ತೆಗೆದುಕೊಂಡು ಹೊದರು, ಹೀಗಾದರೆ ಇತರ ಜಿಲ್ಲೆಗಳ ಅಭಿವೃದ್ದಿ ಹೇಗೆ ಆಗುತ್ತದೆ. 17 ಜನ ಶಾಸಕರ ರಾಜೀನಾಮೆಯಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ, ಮಹೇಶ್ ಕುಮಟಳ್ಳಿಯವರನ್ನು ಗೆಲ್ಲಿಸಿ ಎಂದರು.

ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪನವರು 75 ವರ್ಷದ ವಯೋವೃದ್ಧರಾಗಿದ್ದರೂ ರಾಜ್ಯಾದ್ಯಂತ ಓಡಾಡಿ ಸಂತ್ರಸ್ತರ ಅಳಲು ಆಲಿಸಿದರು. ಆದರೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಲಿಲ್ಲ, ಅದಕ್ಕೆ ನಾನು ಜನರ ಧ್ವನಿಯಾಗಿ ನಿಂತೆ, ಪಕ್ಷದ ನಾಯಕರು ನನಗೆ ನೋಟಿಸ್ ಜಾರಿ ಮಾಡಿದರು. ನಮ್ಮ ಬಿಜೆಪಿಯ ಕೆಲ ನಾಯಕರಿಗೆ, ನಿಮಗೆ ಪ್ರಧಾನಮಂತ್ರಿ ಮುಂದೆ ಮಾತನಾಡುವ ಧೈರ್ಯ ಇಲ್ಲದಿದ್ದರೆ ನಾನು ಮಾತನಾಡುತ್ತೇನೆ ಎಂದೆ, ಇದರ ಪ್ರತಿ ಫಲವಾಗಿ 1,200 ಕೋಟಿ ಕೇಂದ್ರದಿಂದ ಬಿಡುಗಡೆ ಆಯಿತು ಎಂದರು.

For All Latest Updates

TAGGED:

ABOUT THE AUTHOR

...view details