ಕರ್ನಾಟಕ

karnataka

ETV Bharat / state

ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್

ಈಗ ಸಾಕಷ್ಟು ಬದಲಾವಣೆ ಆಗುತ್ತಿದೆ. ಯುಗಾದಿಯೂ ಬರುತ್ತಿದೆ, ಬದಲಾವಣೆ ನಿಶ್ಚಿತ. ರಾಜ್ಯದಲ್ಲಿ ಒಳ್ಳೆ ಬೆಳವಣಿಗೆ ರಾಜ್ಯದಲ್ಲಿ ಆಗಲಿವೆ. ನಾನು ಮಂತ್ರಿ ಸ್ಥಾನ ಬೇಡಿಲ್ಲ, ನಾನು ಹೋರಾಟ ಮಾಡುತ್ತಿರುವುದು 2ಎ ಮೀಸಲಾತಿಗೆ. ಬಜೆಟ್ ಅಧಿವೇಶನ ಪೂರ್ವದಲ್ಲಿ ಮೀಸಲಾತಿ ಕೊಡುವುದಾಗಿ ಬೆಳಗಾವಿಯಲ್ಲೇ ಸಿಎಂ ಬೊಮ್ಮಾಯಿ ಹೇಳಿದ್ದರು. ಕರ್ನಾಟಕ ಬಜೆಟ್‌ಗಿಂತ ಮೊದಲೇ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ನಂಬಿಕೆ‌ ಇದೆ..

ಶಾಸಕ ಯತ್ನಾಳ್
ಶಾಸಕ ಯತ್ನಾಳ್

By

Published : Feb 2, 2022, 4:26 PM IST

Updated : Feb 2, 2022, 4:58 PM IST

ಬೆಳಗಾವಿ :ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಬಂದ ಮೇಲೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ.

ಕ್ರಿಯಾಶೀಲವಾಗಿ ಕೆಲಸ ಮಾಡುವ ಎರಡನೇ ನಾಯಕತ್ವ ರಾಜ್ಯಕ್ಕೆ ಬೇಕಾಗಿದೆ. ಬಿಎಸ್‌ವೈ ಯುಗ ಅಂತ್ಯವಾಗಿದೆ. ಅವರ ಸಮಕಾಲೀನ ಇನ್ನೂ ಮೂರ್ನಾಲ್ಕು ಜನರದ್ದು ಯುಗ ಮುಗಿಯಲು ಬಂದಿದೆ. ಬಸವರಾಜ ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದರು.

ಆದರೆ, ಎರಡನೇ ನಾಯಕತ್ವ ಪಕ್ಷಕ್ಕೆ ಬೇಕಾಗಿದೆ. ಇದಕ್ಕಾಗಿ ಹೊಸ ಪ್ರಕ್ರಿಯೆ ನಡೆದಿದೆ. ಮುಂದಿನ ಚುನಾವಣೆಗೆ ಪಕ್ಷದ ವರಿಷ್ಠರು ಒಳ್ಳೆ ಟೀಮ್ ಮಾಡಲಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರುವ ಪ್ಲ್ಯಾನ್ ಇಟ್ಟುಕೊಂಡೇ ಬದಲಾವಣೆ ಮಾಡುತ್ತಿದ್ದಾರೆ ಎಂದರು.

ಯುಗಾದಿ ವೇಳೆಗೆ ಬದಲಾವಣೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಸದರ ಜೊತೆಗೆ ಚರ್ಚಿಸಲು ಸಿಎಂ ದೆಹಲಿಗೆ ಹೊರಟಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರದ ಕುರಿತು ಸಂಸದರ ಜೊತೆಗೆ ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ತರುವ ಸಂಪ್ರದಾಯ ಮೊದಲಿನಿಂದಲೂ ಇದೆ. ಸಂಸದರ ಸಭೆ ಹಿನ್ನೆಲೆ ದೆಹಲಿಗೆ ಹೋಗುತ್ತಿರಬಹುದು ಎಂದರು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಎಂದ ಶಾಸಕ ಯತ್ನಾಳ್

ಈಗ ಸಾಕಷ್ಟು ಬದಲಾವಣೆ ಆಗುತ್ತಿದೆ. ಯುಗಾದಿಯೂ ಬರುತ್ತಿದೆ, ಬದಲಾವಣೆ ನಿಶ್ಚಿತ. ರಾಜ್ಯದಲ್ಲಿ ಒಳ್ಳೆ ಬೆಳವಣಿಗೆ ರಾಜ್ಯದಲ್ಲಿ ಆಗಲಿವೆ. ನಾನು ಮಂತ್ರಿ ಸ್ಥಾನ ಬೇಡಿಲ್ಲ, ನಾನು ಹೋರಾಟ ಮಾಡುತ್ತಿರುವುದು 2ಎ ಮೀಸಲಾತಿಗೆ. ಬಜೆಟ್ ಅಧಿವೇಶನ ಪೂರ್ವದಲ್ಲಿ ಮೀಸಲಾತಿ ಕೊಡುವುದಾಗಿ ಬೆಳಗಾವಿಯಲ್ಲೇ ಸಿಎಂ ಬೊಮ್ಮಾಯಿ ಹೇಳಿದ್ದರು. ಕರ್ನಾಟಕ ಬಜೆಟ್‌ಗಿಂತ ಮೊದಲೇ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ನಂಬಿಕೆ‌ ಇದೆ ಎಂದರು.

ಸಾವಿರ ಪೀಠ ಆದರೆ ಪ್ರಯೋಜನವಿಲ್ಲ :ಕೂಡಲಸಂಗಮ ಪೀಠಕ್ಕೆ ಪರ್ಯಾಯ ಪೀಠ ಆರಂಭಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಪೀಠಗಳು ನೂರಾಗಲಿ, ಸಾವಿರಾದರೂ ಏನೂ ಪ್ರಯೋಜನವಿಲ್ಲ. ಪೀಠಗಳು ಆಗುತ್ತವೆ, ಕುರ್ಚಿ ಇಟ್ಟುಕೊಂಡು ಕೂಡುತ್ತಾರಷ್ಟೇ.. ಪೀಠಗಳಿಂದ ಯಾವುದು ಲಾಭವಿಲ್ಲ. ಸಮುದಾಯದ ಭವಿಷ್ಯಕ್ಕಾಗಿ ಹೋರಾಟ ಮಾಡುವವರ ಜೊತೆಗೆ ಜನ ಇರುತ್ತಾರೆ.

ಯಾವನೋ ಒಬ್ಬ ಫೈನಾನ್ಸಿಯರ್ ಕಾರ್ಯಕ್ರಮಕ್ಕೆ ಹಣ ಕೊಟ್ಟು‌ ಜನರನ್ನು ಸೇರಿಸುವುದರಿಂದ ಪೀಠಕ್ಕೆ ಗೌರವ ಬರುವುದಿಲ್ಲ ಎಂದು ಸಚಿವ ನಿರಾಣಿ ವಿರುದ್ಧ ಪರೋಕ್ಷವಾಗಿ ಯತ್ನಾಳ್‌ ವಾಗ್ದಾಳಿ ನಡೆಸಿದರು. ಯಾವನೋ ಒಬ್ಬನ ಮಂತ್ರಿ ಮಾಡುವ ಸಲುವಾಗಿ ಹರ ಜಾತ್ರೆ ಮಾಡುವುದು. ಯಾವನೋ ಮುಖ್ಯಮಂತ್ರಿ ಮಾಡಲು ಮತ್ತೊಂದು ಪೀಠ ಸ್ಥಾಪನೆ ಮಾಡುವುದು ಸಮಂಜಸವಲ್ಲ. ಈ ಉದ್ದೇಶ ಕೂಡಲಸಂಗಮ ಸ್ವಾಮೀಜಿಗಳಿಗಿಲ್ಲ. ಸಮಾಜ ಒಡೆದವರು ಎಲ್ಲರೂ ಯಾರೂ ಉಳಿದಿಲ್ಲ.‌ ಸಮಾಜ ಒಡೆಯುವವರ ಭವಿಷ್ಯವೂ ಹೀಗೆ ಆಗಲಿದೆ ಎಂದರು.

ಚುನಾವಣೆ ಆರು‌ ತಿಂಗಳಿದ್ದಾಗ ಸಚಿವರನ್ನಾಗಿ ಮಾಡಿದರೆ ಏನು ಪ್ರಯೋಜನ. ನಮ್ಮ ಮತ ಕ್ಷೇತ್ರವನ್ನೂ ನಾವು ಕಾಯ್ದುಕೊಳ್ಳಬೇಕಾಗುತ್ತೆ. ಮಂತ್ರಿಯಾಗಿ ಬೆಂಗಳೂರಿನಲ್ಲಿ ಕುಳಿತರೆ ನಮ್ಮ ಕ್ಷೇತ್ರ ಕೈತಪ್ಪುತ್ತೆ‌. ಈಗ ಸಂಪುಟ ವಿಸ್ತರಣೆ ಆದರೆ ಸಚಿವರಾಗಬಹುದು. ಇಲ್ಲವಾದರೆ ಮೂರು ತಿಂಗಳು ಸನ್ಮಾನ, ಮೂರು ತಿಂಗಳು ಚುನಾವಣೆ ಮಾಡಬೇಕಾಗುತ್ತದೆ. ಸನ್ಮಾನದ ಹೂವು ಬಾಡುವ ಮೊದಲೇ ನಾವು ಠೇವಣಿ ಕಳೆದುಕೊಳ್ತೇವೆ.

ಈಗ ಇದ್ದ ಸಚಿವರ ಪೈಕಿ ಕೆಲವರು ಸಂಘಟನಾತ್ಮಕ ಚತುರರಿದ್ದಾರೆ. ಹೊಸದಾಗಿ ಮಂತ್ರಿಯಾದವರಿಗೆ ಅವಕಾಶ ಸಿಕ್ಕರೆ ಚುನಾವಣೆ ವೇಳೆ ಹುರುಪಿನಿಂದ ಕೆಲಸ ಮಾಡುತ್ತಾರೆ. ರಮೇಶ್ ಜಾರಕಿಹೊಳಿ‌ ಜೊತೆಗಿನ ಭೇಟಿ ಸೌಹಾರ್ದಯುತ. ಎರಡು ಸಲ ಅವರು ವಿಜಯಪುರಕ್ಕೆ ಬಂದಿದ್ದರು. ನಾನೊಮ್ಮೆ ಅವರ ಮನೆಗೆ ಊಟಕ್ಕೆಂದು ಹೋಗಿದ್ದೆ. ಆ ವೇಳೆ ನಾವು ರಾಜಕೀಯ ಚರ್ಚೆ ಮಾಡಿಲ್ಲ. ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ ಎಂದರು.

ಇದನ್ನೂ ಓದಿ:ನನ್ನ ವಿರುದ್ಧ ದೂರು ಕೊಟ್ಟವರು ಎಂಟಿಆರ್ ಫುಡ್ ಇರ್ಬೇಕು: ಸ್ವಪಕ್ಷೀಯರಿಗೆ ರೇಣುಕಾಚಾರ್ಯ ಟಾಂಗ್

Last Updated : Feb 2, 2022, 4:58 PM IST

For All Latest Updates

ABOUT THE AUTHOR

...view details