ಕರ್ನಾಟಕ

karnataka

ETV Bharat / state

ಬೆಳಗಾವಿ: ಹತ್ಯೆ ಬಳಿಕ ವ್ಯಕ್ತಿಯ ಶವ ಬಾವಿಗೆಸೆದ ದುಷ್ಕರ್ಮಿಗಳು - ವ್ಯಕ್ತಿಯ ಬರ್ಬರ ಹತ್ಯೆ

ಬೆಳಗಾವಿಯ ತಾನಾಜಿ ಗಲ್ಲಿಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Jan 2, 2024, 1:56 PM IST

ಬೆಳಗಾವಿ: ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ, ಶವ ಬಾವಿಗೆಸೆದು ಪರಾರಿಯಾಗಿರುವ ಘಟನೆ ತಾನಾಜಿ ಗಲ್ಲಿಯಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹನುಮಂತ ಮಾದ್ಯಾಳಿ (37) ‌ಕೊಲೆಯಾದವರು.

ತಾನಾಜಿ ಗಲ್ಲಿಯ ಬಾಡಿಗೆ ಮನೆಯಲ್ಲಿ ಹನುಮಂತ ವಾಸವಿದ್ದರು. ಘಟನೆಯಿಂದ ಗಲ್ಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗಾರರಿಗೆ ಬಲೆ ಬೀಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಳ್ಳಾರಿ : ಹೊಸ ವರ್ಷಾಚರಣೆಗೆ ಕೇಕ್​ ತರಲು ಬಂದಿದ್ದ ಯುವಕನ ಹತ್ಯೆ

ABOUT THE AUTHOR

...view details