ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ನೋಟಿಸ್​​: ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಬ್ಯಾಂಕ್​ ಅಧಿಕಾರಿಗಳು - ಐಸಿಐಸಿಐ ಬ್ಯಾಂಕ್‌ನಿಂದ ರೈತನಿಗೆ ನೋಟಿಸ್

ನೆರೆ ಸಂತ್ರಸ್ತರಿಗೆ ಯಾವುದೇ ನೋಟಿಸ್ ನೀಡಬಾರದು ಎಂದು ಸರ್ಕಾರ ಸ್ಪಷ್ಟ ಆದೇಶವಿದ್ದರೂ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ನೋಟಿಸ್​ ನೀಡಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ನೆರೆ ಸಂತ್ರಸ್ತರಿಗೆ ನೋಟಿಸ್..!

By

Published : Oct 11, 2019, 11:03 PM IST

ಅಥಣಿ/ಬೆಳಗಾವಿ:ನೆರೆ ಸಂತ್ರಸ್ತರಿಗೆ ಯಾವುದೇ ರೀತಿ ಸಾಲ ಮರುಪಾವತಿಗೆ ನೋಟಿಸ್ ನೀಡಬಾರದು ಎಂದು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅಥಣಿ ಐಸಿಐಸಿಐ ಬ್ಯಾಂಕ್‌ ರೈತನಿಗೆ ನೋಟಿಸ್ ನೀಡಿ ಶಾಕ್ ನೀಡಿದೆ. ಹೀಗಾಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಅಥಣಿ ಐಸಿಐಸಿಐ ಬ್ಯಾಂಕ್ ನೋಟಿಸ್ ನೀಡಿದ್ದಲ್ಲದೇ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದೆ. ಸುಟ್ಟಟ್ಟಿ ಗ್ರಾಮದ ರೈತ ಹನಮಂತ ಸವದಿಗೆ ಸೇರಿದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಜಿಲ್ಲೆಯ ಡಿಸಿ ಆದೇಶಕ್ಕೆ ಕಿಮ್ಮತ್ತು ನೀಡದ ಐಸಿಐಸಿಐ ಬ್ಯಾಂಕ್ ಸಿಬ್ಬಂದಿ ನಿಯಮ ಮೀರಿ ವರ್ತಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಬ್ಯಾಂಕ್ ನೋಟಿಸ್, ಡಿಸಿ ಆದೇಶಕ್ಕಿಲ್ವಾ ಕಿಮ್ಮತ್ತು?
ಪ್ರವಾಹ ಪ್ರದೇಶದ ಯಾವುದೇ ರೈತರಿಗೆ ಕಿರುಕುಳ ನೀಡದಂತೆ ಬ್ಯಾಂಕ್​ಗೆ ಬೆಳಗಾವಿ ಡಿಸಿ ಆದೇಶ ನೀಡಿದ್ದರು. ಹೀಗಾಗಿ ಇಂದು ಅಥಣಿ ಪಟ್ಟಣದ ಐಸಿಐಸಿಐ ಬ್ಯಾಂಕ್ ಶಾಖೆ ಎದುರು ಬ್ಯಾಂಕ್ ಕ್ರಮ ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಜಪ್ತಿ ಮಾಡಿದ ಟ್ರ್ಯಾಕ್ಟರ್ ವಾಪಸ್ ನೀಡುವುದಾಗಿ ಅಥಣಿ ಶಾಖೆ ಬ್ಯಾಂಕ್ ಮ್ಯಾನೆಜರ್ ಭರವಸೆ ನೀಡಿದ್ರು. ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು.

ABOUT THE AUTHOR

...view details