ಬೆಳಗಾವಿ: ಎರಡು ನಿಮಿಷದ ಕೆಲಸಕ್ಕೆ ಅರ್ಧಗಂಟೆ ಕಾಯಿಸಿದ್ದಾರೆಂದು ಆರೋಪಿಸಿರುವ ಬ್ಯಾಂಕ್ ಗ್ರಾಹಕ ಹಾಗು ಸಿಬ್ಬಂದಿ ನಡುವಿನ ಮಾತಿನ ಚಕಮಕಿ ನಡೆದಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಕಿತ್ತೂರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಈ ಘಟನೆ ನಡೆದಿದೆ.

ವೇತನದ ಚೆಕ್ ಸಂದಾಯ ಮಾಡಲು ಸುನೀಲ ನರಗುಂದ ಎಂಬವರು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಮೊದಲು 10 ನಿಮಿಷ ಕಾಯಿಸಿದ ಸಿಬ್ಬಂದಿ, ಕೆಲಸ ಇದೆ ಇನ್ನೂ ಅರ್ಧಗಂಟೆ ಕಾಯುವಂತೆ ಸೂಚಿಸಿದ್ದಾರೆ. ಗ್ರಾಹಕ ಅರ್ಧಗಂಟೆ ಕಾದು ಮತ್ತೆ ಚೆಕ್ ನೀಡಲು ಕೌಂಟರ್ಗೆ ಹೋಗಿದ್ದಾರೆ. ಆಗ ಊಟದ ಸಮಯವಾಗಿದೆ, ಬಳಿಕ ಬನ್ನಿ ಎಂದ ಬ್ಯಾಂಕ್ ಸಿಬ್ಬಂದಿಯ ಹೇಳಿಕೆ ಸುನೀಲ ನರಂಗುದ ಸಿಟ್ಟಾಗಿದ್ದಾರೆ. ಈ ವೇಳೆ ಸುನೀಲ ಹಾಗೂ ಬ್ಯಾಂಕ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದೆ
ಬ್ಯಾಂಕ್ ಸಿಬ್ಬಂದಿ ವರ್ತನೆಯನ್ನು ಸುನೀಲ ನರಗುಂದ ಅವರೇ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.