ಚಿಕ್ಕೋಡಿ: ಪಟ್ಟಣದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಬೆಳೆದ ಬಾಳೆ ಗಿಡಗಳು ನೆಲಕ್ಕುರುಳಿದ್ದು, ಬೆಳೆ ಕೈಗೆ ಸಿಗದೆ ರೈತ ಬೇಸರ ವ್ಯಕ್ತ ಪಡಿಸಿದ್ದಾನೆ.
ಬಿರುಗಾಳಿ ಮಳೆಗೆ ಧರೆಗುರುಳಿದ ಬಾಳೆ ಗಿಡಗಳು, ರೈತ ಕಂಗಾಲು - Banana trees fall dwon news
ಚಿಕ್ಕೋಡಿ ಪಟ್ಟಣದಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ರೈತ ಸಂತೋಷ್ ಎಂಬುವವರು ಬೆಳೆದ ಬಾಳೆ ಗಿಡಗಳು ನೆಲಕ್ಕುರುಳಿವೆ. ಪರಿಣಾಮ, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ರೈತ ಸಂತೋಷ್
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದ ರೈತ ಸಂತೋಷ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 8 ಎಕರೆ ಹೊಲದಲ್ಲಿ ಬಾಳೆ ಕೃಷಿ ಮಾಡಿದ್ದರು. ಇನ್ನೇನು ಫಸಲು ಕೈಗೆ ಬರಬೇಕು ಎನ್ನುವಷ್ಟರಲ್ಲಿ ಮಳೆ ಸುರಿದಿದೆ. ಇದರಿಂದ ಬಾಳೆ ಗಿಡಗಳು ನೆಲಕ್ಕುರುಳಿವೆ.
ಇಂತಹ ಕಷ್ಟ ಕಾಲದಲ್ಲಿ ರೈತನ ಸಹಾಯಕ್ಕೆ ಬಾರದ ಸರ್ಕಾರದ ವಿರುದ್ಧ ರೈತ ಸಂತೋಷ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾನೆ.