ಬೆಳಗಾವಿ:ಯುವಕರ ದಾರಿ ತಪ್ಪಿಸುತ್ತಿರುವ ಪಬ್ಜಿ ಹಾಗೂ ಇನ್ನಿತರೆ ಮೂಬೈಲ್ ಆ್ಯಪ್ಗಳನ್ನು ನಿಷೇಧಿಸುವ ಮೂಲಕ ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ನಗರದ ಸಿದ್ದೇಶ್ವರಿ ಮಹಿಳಾ ಮಂಡಳಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಯುವಕರ ದಾರಿ ತಪ್ಪಿಸುವ ಗೇಮ್ ಅ್ಯಪ್ಗಳನ್ನು ನಿಷೇಧಿಸಿ: ಬೆಳಗಾವಿ ಡಿಸಿಗೆ ಮಹಿಳೆಯರ ಮನವಿ - latest news of belgavi
ಯುವಕರ ದಾರಿ ತಪ್ಪಿಸುತ್ತಿರುವ ಪಬ್ಜಿ ಹಾಗೂ ಇನ್ನಿತರೆ ಮೂಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡುವ ಮುಖಾಂತರ ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕೆಂದು ಬೆಳಗಾವಿಯ ಸಿದ್ದೇಶ್ವರಿ ಮಹಿಳಾ ಮಂಡಳಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಿದ್ದೇಶ್ವರಿ ಮಹಿಳಾ ಮಂಡಳಿ ಸದಸ್ಯರು, ಪಬ್ಜಿ ಮತ್ತು ಇತರ ಮೂಬೈಲ್ ಆಟಗಳಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಶಾಲಾ ಕಾಲೇಜುಗಳಿಗೂ ಹೋಗದೆ ಇಂತಹ ಅಪಾಯಕಾರಿ ಆಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿಯೇ ದಾಖಲಾಗಿದ್ದು, ಕೂಡಲೇ ಇಂತಹ ಆಘಾತಕಾರಿ ಆ್ಯಪ್ ನಿಷೇಧಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ನಿವಾಸಿ ಪ್ರವೀಣ ಪಾಟೀಲ್ ಮಾತನಾಡಿ, ಪಬ್ಜಿ ಆಟ ಯುವಕರನ್ನು ದಾರಿ ತಪ್ಪಿಸುತ್ತಿದೆ. ಕೊಲೆ, ಹತ್ಯೆಗಳಿಗೂ ದಾರಿ ಮಾಡಿಕೊಡುತ್ತಿದೆ. ಬೆಳಗಾವಿಯ ಕಾಕತಿ ಮತ್ತು ಸಾಂಗ್ಲಿ ಸೇರಿದಂತೆ ವಿವಿಧೆಡೆ ಇಂತಹ ಕೃತ್ಯಗಳು ಕಂಡು ಬಂದಿದ್ದು, ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದರು.