ಕರ್ನಾಟಕ

karnataka

ETV Bharat / state

ರಮೇಶ್​ ಜಾರಕಿಹೊಳಿ ಪರೋಕ್ಷವಾಗಿ ಬಿಜೆಪಿ ಪರ ಇದ್ದಾರೆ : ಬಾಲಚಂದ್ರ ಜಾರಕಿಹೊಳಿ - undefined

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಶಕ್ತಿ ಸಿಕ್ಕಿದೆ. ಆ ಶಕ್ತಿ ಏನೆಂದು ನಿಮಗೂ ಗೊತ್ತಿದೆ. ಅದರ ಮೂಲಕ ಇನ್ನು ಹೆಚ್ಚಿನ ಗೆಲುವಿಗೆ ಅನುಕೂಲವಾಗಲಿದೆ ಎಂದು ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಸುರೇಶ್ ಅಂಗಡಿ ಪರ ಪ್ರಚಾರದಲ್ಲಿ ಹೇಳಿಕೆ ನೀಡುವ ಮೂಲಕ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹತ್ತಿರವಾಗಿದ್ದಾರಾ ಎಂಬ ಸಂಶಯ ಜನ ಸಾಮಾನ್ಯರಲ್ಲಿ ಮೂಡಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ

By

Published : Apr 14, 2019, 12:36 PM IST

ಬೆಳಗಾವಿ : ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪರವಾಗಿದ್ದಾರೆ ಎಂದು ಪರೋಕ್ಷವಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನಲ್ಲಿ ನಡೆದ ಬಿಜೆಪಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಶಕ್ತಿ ಸಿಕ್ಕಿದೆ. ಆ ಶಕ್ತಿ ಏನೆಂದು ನಿಮಗೂ ಗೊತ್ತಿದೆ. ಅದರ ಮೂಲಕ ಇನ್ನು ಹೆಚ್ಚಿನ ಗೆಲುವಿಗೆ ಅನುಕೂಲವಾಗಲಿದೆ ಎಂದರು.

ಬಾಲಚಂದ್ರ ಜಾರಕಿಹೊಳಿ

ನಗರದಲ್ಲಿ ಬಿಜೆಪಿ ಪ್ರಭಲವಾಗಿದೆ. ಬಿಜೆಪಿ ಅಭ್ಯರ್ಥಿ ಜಯ ಗಳಿಸಲಿದ್ದಾರೆ. ಆ ಒಂದು ಶಕ್ತಿಯಯಿಂದ ಬೆಳಗಾವಿ ನಗರದಿಂದ ಹೆಚ್ಚಿನ ಮತಗಳ ಅಂತರದಿಂದ ಸುರೇಶ್ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದರು. ಅಲ್ಲದೇ ಈ ಒಂದು ಶಕ್ತಿಯಿಂದ ಯಡಿಯೂರಪ್ಪ ಅವರಿಗೆ ಸಾಕಷ್ಟು ಶಕ್ತಿ ಬರುತ್ತದೆ. ಇದರಿಂದ ಉತ್ತಮವಾದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ನಡೆಯನ್ನು ಬಿಟ್ಟುಕೊಟ್ಟರು.

ತೆರೆಮರೆಯಲ್ಲಿ ರಾಜಕೀಯ ಆಟ ಆಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ನಡೆ ನಿಗೂಢವಾಗಿತ್ತು. ಆದರೆ ಈಗ ಸಹೋದರರ ಹೇಳಿಕೆ ನೋಡಿದರೆ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹತ್ತಿರವಾಗಿದ್ದಾರಾ ಎಂಬ ಸಂಶಯ ಜನ ಸಾಮಾನ್ಯರನ್ನು ಕಾಡುತ್ತಿದೆ.

For All Latest Updates

TAGGED:

ABOUT THE AUTHOR

...view details