ಕರ್ನಾಟಕ

karnataka

ETV Bharat / state

ಡಿಕೆಶಿ ನನಗೆ ಒಳ್ಳೆಯ ಸ್ನೇಹಿತ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಬಾಲಚಂದ್ರ ಜಾರಕಿಹೊಳಿ - Belgaum News

ಡಿ.ಕೆ ಶಿವಕುಮಾರ್ ಮೊದಲಿನಿಂದಲೂ ನನಗೆ ಒಳ್ಳೆಯ ಸ್ನೇಹಿತ, ಕಾನೂನಿನ ಪ್ರಕಾರ ಅವರ ಮೇಲಿರುವ ಆಪಾದನೆಗಳನ್ನು ಎದುರಿಸುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು, ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಶಾಸಕ ಬಾಲಚಂದ್ರ ಜಾರಕಿಹೊಳಿ

By

Published : Aug 30, 2019, 10:19 PM IST

ಬೆಳಗಾವಿ : ಡಿ.ಕೆ ಶಿವಕುಮಾರ್ ಮೊದಲಿನಿಂದಲೂ ನನಗೆ ಒಳ್ಳೆಯ ಸ್ನೇಹಿತ, ಕಾನೂನಿನ ಪ್ರಕಾರ ಅವರ ಮೇಲಿರುವ ಆಪಾದನೆಗಳನ್ನು ಎದುರಿಸುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು, ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ನಗರದ ಸಾಮ್ರಾ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿ, ಕೆಲವು ಬಾರಿ ನಾವು ರಾಜಕೀಯ ಮೀರಿ ಸ್ನೇಹಿತರಾಗಿರುತ್ತೇವೆ. ಅದೇ ರೀತಿಯಲ್ಲಿ ಡಿ.ಕೆ ಶಿವಕುಮಾರ್ ನನಗೆ ಒಳ್ಳೆಯ ಸ್ನೇಹಿತರು. ಅವರ ಮೇಲೆ ಐಟಿ ಹಾಗೂ ಇಡಿ ಪ್ರಕರಣ ದಾಖಲಾಗಿದ್ದು ಕಾನೂನಿನಲ್ಲಿ ಹೋರಾಡುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ನಾಲಿಗೆ ಹರಿಬಿಡದಂತೆ ಸಲಹೆ :ಜನರಿಗಾಗಿ ನಾನು ಭಿಕ್ಷೆ ಬೇಡಲು ಸಿದ್ದಳಿರುವುದಾಗಿ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ವಯಕ್ತಿಕವಾಗಿ ನನಗೆ ಯಾವುದೇ ದ್ವೇಶವಿಲ್ಲ. ಆದರೆ ಕೆಲವೊಮ್ಮೆ ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಡುತ್ತಾರೆ. ಆದ್ದರಿಂದ ಮಾತಿನ ಮೇಲೆ ನಿಗಾ ವಹಿಸುವಂತೆ ಸಲಹೆ ನೀಡಿದ್ದೇನೆ ಎಂದರು..

ಉಮೇಶ್ ಹಾಗೂ ರಮೇಶ್ ಕತ್ತಿಗೆ ಸೂಕ್ತ ಸ್ಥಾನಮಾನ ಭರವಸೆ :ರಮೇಶ್ ಹಾಗೂ ಉಮೇಶ್ ಕತ್ತಿಯವರಿಗೆ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ. ಇಬ್ಬರು ಪಕ್ಷದ ನಾಯಕರು, ಸೂಕ್ತ ಸಂದರ್ಭದಲ್ಲಿ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ. ಜೊತೆಗೆ ಪಕ್ಷದ ಮುಖಂಡರು ಸೇರಿ ಅವರ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ABOUT THE AUTHOR

...view details