ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಬಕ್ರೀದ್​ ಆಚರಣೆ - Bakrid celebration in Belagavi news

ಪ್ರತೀ ವರ್ಷದಂತೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್ ಹಬ್ಬ ಆಚರಣೆ
ಬಕ್ರೀದ್ ಹಬ್ಬ ಆಚರಣೆ

By

Published : Aug 1, 2020, 4:34 PM IST

ಬೆಳಗಾವಿ: ನಗರದ ವಿವಿಧ ಮಸೀದಿಗಳಲ್ಲಿ ಜಿಲ್ಲಾಡಳಿತದ ನಿಯಮಗಳನ್ನು ಪಾಲನೆ ಮಾಡಿ, ಈದ್-ಉಲ್-ಅದಾವನ್ನು ಮುಸ್ಲೀಂ ಧರ್ಮೀಯರು ಸರಳವಾಗಿ ಆಚರಿಸಿದರು.

ಬಕ್ರೀದ್ ಹಬ್ಬ ಆಚರಣೆ

ಈ ವೇಳೆ, ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿಯೇ ಮಸೀದಿಯೊಳಗೆ ಬಿಡಲಾಯಿತು. ಜನರು ಮಾಸ್ಕ್ ಧರಿಸಿದ್ದು, 50 ಸದಸ್ಯರ ಬ್ಯಾಚ್ ಮೂಲಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ಈ ವೇಳೆ ಹಫೀಜ್ ಅಬ್ದುಲ್ ರಜಾಕ್ ಮಾತನಾಡಿ, ದೇಶಾದ್ಯಂತ ಕೊರೊನಾ ವೈರಸ್ ಇರುವುದರಿಂದ ಬಕ್ರೀದ್ ಹಬ್ಬ ಕಳೆಗುಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟೂ ಬೇಗನೆ ಗುಣಮುಖರಾಗಲಿ. ಕೊರೊನಾ ಸೋಂಕು ಸಂಕಷ್ಟದಿಂದ ದೇವರು ಮುಕ್ತಿ ನೀಡಲೆಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ABOUT THE AUTHOR

...view details