ಬೆಳಗಾವಿ: ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರಗೆ ತೆಗೆಯೋಕೆ ಯಾರೇ ಪ್ರಯತ್ನ ಪಟ್ಟರೂ ಆಗಲ್ಲ. ನಮ್ಮ ದೇಶದಲ್ಲಿ ಸಾಮಾಜಿಕ ಜನಜೀವನದಿಂದ ಆಡಳಿತ ವ್ಯವಸ್ಥೆಯಿಂದ ಧರ್ಮ ಹೊರ ತೆಗೆಯೋಕೆ ಯಾರು ಪ್ರಯತ್ನ ಪಟ್ಟರೂ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಮಾತನಾಡಿದರು ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನೇರಿ ಮಠ ಹತ್ತಾರು ವಿಶ್ವವಿದ್ಯಾಲಯ, ನೂರಾರು ಸಂಘ ಸಂಸ್ಥೆಗಳು ಕೆಲಸ ಮಾಡ್ತಿದೆ. ಒಂದು ದೊಡ್ಡದಾದ ಸರ್ಕಾರ ಮಾಡಬೇಕಾದ ಕೆಲಸ ಒಂದು ಸೀಮಿತವಾದ ಜಾಗದಲ್ಲಿ ಮಾಡ್ತಿರೋದು ಹೆಮ್ಮೆ ಅನಿಸುತ್ತದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪೂಜ್ಯ ಶ್ರೀಗಳು ತಮ್ಮ ಆಧ್ಯಾತ್ಮ ಶಕ್ತಿಯಿಂದ ಸಾಮಾಜಿಕ ಮನೋಭಾವ ಕಾರಣಕ್ಕೆ ಮಾಡಿ ತೋರಿಸುತ್ತಿದ್ದಾರೆ. ಇಲ್ಲಿ ಏನಿದೆ ಅಂತಾ ಪಟ್ಟಿ ಮಾಡುವುದಕ್ಕಿಂತ ಏನಿಲ್ಲ ಅಂತಾ ಪಟ್ಟಿ ಮಾಡಿದ್ರೆ ಬೇಗ ಮುಗಿದು ಹೋಗಿ ಬಿಡುತ್ತದೆ ಎಂದರು.
ಗೋಶಾಲೆ ಕೇವಲ ಪೂಜೆಗೆ ಸೀಮಿತವಾಗಿಲ್ಲ. ಆರ್ಥಿಕತೆಗೆ ಗೋಶಾಲೆ ಹೇಗೆ ಬೆಳೆಸಬಹುದು ಎಂಬ ವ್ಯವಹಾರಿಕ ಪ್ರಜ್ಞೆ ಕೂಡ ಇದೆ. ಕೃಷಿ ವಿಜ್ಞಾನ ಕೇಂದ್ರವಿದೆ. ಭಾರತದ ಆಧ್ಯಾತ್ಮಿಕ ವಿಜ್ಞಾನ ಪರಂಪರೆಯನ್ನು ತೋರಿಸುವ ಆಲಯಗಳಿವೆ. ಶ್ರೀಗಳ ಸಾಮರ್ಥ್ಯದಿಂದ ಸುತ್ತಮುತ್ತಲಿನ 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪ್ರವೇಶಾತಿ ಹಾಜರಾತಿ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿದೆ.
ನಮ್ಮ ದೇಶದಲ್ಲಿ ಸತ್ವ ಮತ್ತು ಶಾಸ್ತ್ರ ಧರ್ಮ ಮತ್ತು ರಾಜಪರಂಪರೆ ಈ ಎರಡೂ ಒಟ್ಟಿಗೆ ಸೇರಿದಾಗ ತುಂಬ ದೊಡ್ಡ ದೊಡ್ಡ ಬದಲಾವಣೆ ಆಗಿವೆ. ಒಂದಿಷ್ಟು ವಿಶ್ವಾಮಿತ್ರರ ಜೊತೆ ರಾಮ ಲಕ್ಷ್ಮಣರು ಕೈ ಜೋಡಿಸಿದಾಗ ಈ ದೇಶದಲ್ಲಿ ರಾವಣನ ಸಂಹಾರ ಆಗುತ್ತೆ. ರಾಮಾಯಣ ಅಂತಾ ದೊಡ್ಡ ಕಥೆಗಳು ಸಿಗುತ್ತದೆ.
ಸಮರ್ಥ ರಾಮದಾಸರ ಮಾರ್ಗದರ್ಶನ ಶಿವಾಜಿಗೆ ಸಿಕ್ಕಿದಾಗ ಶಿವಾಜಿ ಮಹಾರಾಜ ರಾಜ ಮಾತ್ರ ಆಗದೇ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡ್ತಾರೆ. ಅದಕ್ಕೆ ಸಮರ್ಥ ರಾಮದಾಸರು ಪ್ರೇರಣೆ ಆಗ್ತಾರೆ. ಹಾಗೆಯೇ, ಹಕ್ಕ ಬುಕ್ಕರಿಗೆ ಸ್ವಾಮಿ ವಿದ್ಯಾರಣ್ಯರ ಮಾರ್ಗದರ್ಶನ ಸಿಕ್ಕಿದಾಗ ಆ ಕಾಲದಲ್ಲಿ ನವಾಬರ, ನಿಜಾಮರ ಅತ್ಯಾಚಾರ ದೌರ್ಜನ್ಯ ತುಂಬಿದ ಆಡಳಿತದ ವಿರುದ್ಧ ವಿಜಯ ನಗರ ಸಾಮ್ರಾಜ್ಯ ಪ್ರಾರಂಭ ಮಾಡ್ತಾರೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಲ್ಲಿ ವಿಸ್ತರಿಸಿದ ವಿಜಯ ನಗರ ಸಾಮ್ರಾಜ್ಯದಲ್ಲಿ ಆಡಳಿತ ಹೇಗಿರಬೇಕು, ಸಂಸ್ಕೃತಿ ಹೇಗೆ ಅರಳಬೇಕು? ಸಾಹಿತ್ಯ ಹೇಗೆ ನಿರ್ಮಾಣ ಆಗಬೇಕು? ಧರ್ಮಕ್ಕೆ ರಾಜ್ಯ ಆಧಾರವಾಗಬೇಕು ಎಂಬುದಕ್ಕೆ ವಿಜಯ ನಗರ ಸಾಮ್ರಾಜ್ಯ ಬಹುದೊಡ್ಡ ಉದಾಹರಣೆ ಎಂದರು.
ಈ ದೇಶದಲ್ಲಿ ಧರ್ಮ ಆಡಳಿತದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಮಧ್ಯದಲ್ಲಿ ಯಾರದ್ದೋ ಕೆಲವರ ಮಹತ್ವಾಕಾಂಕ್ಷೆಗೆ ಇನ್ಯಾರದ್ದೋ ಕುತಂತ್ರಗಳಿಗೆ ನಮ್ಮ ದೇಶದಲ್ಲಿ ಜಾತ್ಯಾತೀತತೆ, ಸೆಕ್ಯುಲರಿಸಮ್ ಭ್ರಮೆಯನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ.ಈ ಪ್ರಯತ್ನವನ್ನು ಕೆಲ ರಾಜಕೀಯ ಶಕ್ತಿಗಳು ಮಾಡ್ತವೆ.
ಧರ್ಮವೇ ಆಧಾರ: ಕೆಲ ಬುದ್ಧಿ ಜೀವಿಗಳು ಮಾಡ್ತೀರ್ತಾರೆ. ನಿಜವಾದ ಅರ್ಥದಲ್ಲಿ ಆ ಜಾತ್ಯಾತೀತತೆ, ಸೆಕ್ಯುಲರಿಸಮ್‌ನ್ನು ಅಳವಡಿಸಿಕೊಂಡರೆ ಯಾವುದು ಏನೂ ಅಪಚಾರ ಇಲ್ಲ. ಎಲ್ಲರಿಗೂ ಒಂದೇ ತರಹವಾದ ಭಾವನೆ ಇರುತ್ತದೆ. ಆದ್ರೆ ಜಾತ್ಯಾತೀತತೆ, ಸೆಕ್ಯುಲರಿಸಮ್ ಹೆಸರಲ್ಲಿ ನಮ್ಮ ಸಮಾಜದಲ್ಲಿ ಇರುವ ಒಳ್ಳೆಯ ಅಂಶಗಳನ್ನು ತೆಗೆದು ಹಾಕ್ತೀವಿ ಅಂತಾ ಪ್ರಯತ್ನ ಪಟ್ಟಾಗ ಸಮಾಜ ತನ್ನದೇ ರೀತಿ ವಿರೋಧಿಸುತ್ತದೆ. ಈ ದೇಶದಲ್ಲಿ ಮನುಷ್ಯನ ಬದುಕಿನಲ್ಲಿ ಧರ್ಮವೇ ಆಧಾರ. ಅಧಿಕಾರದ ನಿರ್ವಹಣೆಗೂ ಧರ್ಮವೇ ಆಧಾರ. ಶಿಕ್ಷಣ, ಸಂಸ್ಕಾರ ವ್ಯವಸ್ಥೆಗೂ ಧರ್ಮವೇ ಆಧಾರ ಎಂದರು.
ಕರ್ನಾಟಕದಲ್ಲಿ ವಿಜಯದಶಮಿ ದಿನ ಬನ್ನಿ ಮುಡಿತಾರೆ. ಹತ್ತಾರು ತಾಲೂಕಿನಲ್ಲಿ ಬನ್ನಿ ಮುಡಿಯುವ ಮೊದಲನೆಯ ವ್ಯಕ್ತಿ ಅಲ್ಲಿಯ ತಹಶಿಲ್ದಾರ್. ಕನ್ಯಾಕುಮಾರಿಯಲ್ಲಿ ನವರಾತ್ರಿ ದಿನ ಮೊದಲನೇಯ ಪೂಜೆಗೆ ನಿಂತುಕೊಳ್ಳುವುದು ತಿರುವನಂತಪುರದ ಎಸ್ ಪಿ ಡಿಸಿ ಮುಸಲ್ಮಾನ, ಕ್ರಿಶ್ಚಿಯನ್, ಹಿಂದೂ ಆಗಿರಲಿ ಮೊದಲನೆಯ ಪೂಜೆಗೆ ಬೇಕಾದ ವಸ್ತು ತೆಗೆದುಕೊಂಡು ಹೋಗುತ್ತಾರೆ.
ಧರ್ಮವನ್ನು ದೂರ ಇಟ್ರೆ ಅಧರ್ಮ ಬೆಳೆಯುತ್ತದೆ: ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರಗೆ ತೆಗೆಯೋಕೆ ಯಾರು ಪ್ರಯತ್ನ ಪಟ್ಟರೂ ಆಗಲ್ಲ. ನಮ್ಮ ದೇಶದಲ್ಲಿ ಸಾಮಾಜಿಕ ಜನಜೀವನದಿಂದ, ಆಡಳಿತ ವ್ಯವಸ್ಥೆಯಿಂದ ಧರ್ಮ ಹೊರ ತೆಗೆಯೋಕೆ ಯಾರು ಪ್ರಯತ್ನ ಪಟ್ಟರೂ ಆಗಲ್ಲ. ಯಾಕಂದ್ರೆ ಈ ಮಣ್ಣಿನ ಗುಣ ಅದು. ನಮ್ಮ ದೇಶದಲ್ಲಿ ಧರ್ಮವನ್ನು ದೂರ ಇಡಬೇಕು ಎಂಬ ಭ್ರಮೆ ಇದೆ. ಧರ್ಮವನ್ನು ದೂರ ಇಟ್ರೆ ಅಧರ್ಮ ಬೆಳೆಯುತ್ತದೆ ಎಂದು ಬಿ. ಎಲ್ ಸಂತೋಷ್ ಅವರು ಹೇಳಿದರು.
ಓದಿ:ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ನಾಗೇಶ್