ಕರ್ನಾಟಕ

karnataka

ETV Bharat / state

ಡ್ರಗ್​ ಬಳಕೆ ಮಾಡೋ ವ್ಯಕ್ತಿಗಳ ಚಾರಿತ್ರ್ಯದ ಕುರಿತು ಯೋಚಿಸಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್ - Agriculture Minister B.C. Patil

ಹೆಚ್.ಡಿ.ಕುಮಾರಸ್ವಾಮಿ ಸೀಸನಲ್ ರಾಜಕಾರಣಿ. ಯಾವ ಸೀಸನ್‌ಗೆ ಯಾವ ಹೇಳಿಕೆ ಕೊಡಬೇಕೋ ಕೊಡುತ್ತಾ ಹೋಗ್ತಾರೆ. ಈಗ ಡ್ರಗ್ ಬಂದಾಗ ಡ್ರಗ್ಸ್​​ ಮಾಫಿಯಾ ಅಂತಾರೆ. ಲಿಕ್ಕರ್ ಬಂದಾಗ ಲಿಕ್ಕರ್ ಮಾಫಿಯಾ ಅಂತಾರೆ. ಅವರ ಮಾತು ಸತ್ಯಕ್ಕೆ ದೂರ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​​ ವ್ಯಂಗ್ಯವಾಡಿದ್ದಾರೆ.

b-c-patil-talking-about-drug-mafia
ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : Sep 14, 2020, 1:29 PM IST

ಬೆಳಗಾವಿ:ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಎಲ್ಲಾ ವುಡ್‌ಗಳಲ್ಲಿ ನಶೆ ಇದ್ದೇ ಇದೆ. ಅದನ್ನು ಬಳಕೆ ಮಾಡೋ ವ್ಯಕ್ತಿಗಳ ಚಾರಿತ್ರ್ಯದ ಬಗ್ಗೆ ಯೋಚನೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​​ ಹೇಳಿದರು.

ನಗರದಲ್ಲಿ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್​​​ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡ್ರಗ್ಸ್​​ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಕಿಂಗ್‌ಪಿನ್​ಗಳಾಗಿ ಗಂಡಸರು, ಹೆಂಗಸರು ಇದ್ದಾರೋ, ರಾಜಕಾರಣಿಗಳ ಮಕ್ಕಳು ಇದ್ದಾರೋ ಅವರಾರನ್ನೂ ಬಿಡಲ್ಲ. ಅವರನ್ನು ಮಟ್ಟ ಹಾಕೋ ಕೆಲಸ ಮಾಡಲಾಗುತ್ತದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್

ಬಿ.ಕೆ.ಹರಿಪ್ರಸಾದ್ ಹೇಳಿದ ತಕ್ಷಣ ಅದು ವೇದ ವಾಕ್ಯ ಅಲ್ಲ. ಅವೆರೇನು ಬ್ರಹ್ಮ ‌ ಅಲ್ಲ. ಬಿಜೆಪಿ ನಾಯಕರು ಅಫೀಮು ಸೇವಿಸೋದನ್ನು ಅವರು ಯಾವಾಗಾ ನೋಡಿದ್ರು?... ಮೊದಲೇ ಹೇಳಬೇಕಿತ್ತಲ್ವಾ?.. ಇಷ್ಟು ದಿನ ಏಕೆ ಬಾಯಿ ಮುಚ್ಚಿಕೊಂಡಿದ್ರೂ. ಸುಮ್ಮನೇ ಆಪಾದನೆ ಮಾಡಿ ಹೋಗುವುದು ತಪ್ಪು ಎಂದು ತಿರುಗೇಟು ನೀಡಿದರು.

ಆರ್‌ಎಸ್‌ಎಸ್ ರೀತಿ ನಾವು ಶತ್ರುಗಳನ್ನು ಸೃಷ್ಟಿ ಮಾಡಲ್ಲ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಸ್‌ಡಿಪಿಐ ಮಾಡ್ತಾರಾ? ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರ್ಯಾರು?. ಗಲಾಟೆ ಎಲ್ಲಿಂದ ಆಗಿದೆ?. ಶತ್ರುಗಳನ್ನು ತಯಾರು ಮಾಡ್ತೀರೋರು ಅವರೇ. ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ. ಅವರನ್ನು ಬಚಾವ್ ಮಾಡಲು ಎಷ್ಟೋ ಜನರ ಪ್ರಾಣ ಹೋಗಿದೆ. ಆಸ್ತಿ ಪಾಸ್ತಿ ನಷ್ಟ ಆಗಿದೆ. ಕೋಮುಗಲಭೆಗೆ ಪ್ರಚೋದನೆ ಕೊಡ್ತಾರೆ ಎಂದು ಆರೋಪಿಸಿದರು.

ನಂತರ ಮಾತನಾಡಿ, ಮೋದಿ ಸರ್ಕಾರದ ಬಗ್ಗೆ ಪ್ರಶ್ನೆ ಮಾಡುವ ಯೋಗ್ಯತೆ ಕಾಂಗ್ರೆಸ್​​​ಗೆ ಇಲ್ಲ. ಇನ್ನೂ 50 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರಬೇಕಾಗುತ್ತೆ ಎಂದು ಗುಲಾಂ ನಬಿ ಆಜಾದ್ ಅವರೇ ಹೇಳಿದ್ದಾರೆ. ಕಾಂಗ್ರೆಸ್​​​​​ನ ಹಿರಿಯ ಧುರೀಣರೇ ಒಪ್ಪಿಕೊಂಡಿದಾರಂದ್ರೆ ಬಿಜೆಪಿ ಸರ್ಕಾರ ವೈಫಲ್ಯ ಎಲ್ಲಿಂದ ಬಂತು. ಬಿಎಸ್‌ವೈ ಸಿಎಂ ಆದ್ಮೇಲೆ ಏಕಾಂಗಿಯಾಗಿ ಪ್ರವಾಹ ಪರಿಸ್ಥಿತಿ ನಿಬಾಯಿಸಿದರು, ಬರಗಾಲ ನಿಭಾಯಿಸಿದ್ರು, ಇವತ್ತು ಕೋವಿಡ್ ಸಹ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರದಲ್ಲಿ ಯಾವುದೇ ವೈಫಲ್ಯ ಇಲ್ಲ. ಮುಚ್ಚಿಹಾಕುವ ಅವಶ್ಯಕತೆ ಇಲ್ಲ. ಸತ್ಯಾಂಶ ಹೇಳುತ್ತಿದ್ದೇವೆ ಅಷ್ಟೇ‌ ಎಂದು ಮೋದಿ, ಬಿಎಸ್‌ವೈ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.

ABOUT THE AUTHOR

...view details