ಕರ್ನಾಟಕ

karnataka

ETV Bharat / state

ಮನೆಯಿಂದ ಹೊರ ಬರಬೇಡಿ ಎಂದು ವಾಹನ ಸವಾರರಿಗೆ ಗುಲಾಬಿ ಕೊಟ್ಟ ಪತ್ರಕರ್ತರು

ಅನಿವಾರ್ಯತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಆಗ ಮಾಸ್ಕ್ ಧರಿಸಿ. ಸ್ಯಾನಿಟೈಸರ್ ಬಳಸುವಂತೆ ತಿಳಿ ಹೇಳಲಾಯಿತು ಎಂದು ದೀಪಕ್​​​ ಶಿಂಧೆ ಹೇಳಿದರು.

By

Published : Apr 2, 2020, 4:55 PM IST

Corona virus locked down to prevent panic
ಗುಲಾಬಿ ಹೂವು ನೀಡಿ ಕೊರೊನಾ ವೈರಸ್​ ಕುರಿತು ಜಾಗೃತಿ

ಅಥಣಿ: ಪಟ್ಟಣದ ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ಕೊರೊನಾ ವೈರಸ್​​ ಕುರಿತು ಅರಿವು ಮೂಡಿಸಿದರು.

ಕೊರೊನಾ ವೃರಸ್​​​ನಿಂದ ಭಾರತ ಲಾಕ್​​ಡೌನ್ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಸಾರ್ವಜನಿಕರ ಮೇಲೆ ಪೊಲೀಸರು ಲಾಠಿ ಬೀಸದಂತೆ ಆದೇಶಿಸಿದ ಬೆನ್ನಲ್ಲೇ ರಸ್ತೆಯಲ್ಲಿ ಅನವಶ್ಯಕವಾಗಿ ಬೈಕ್ ಚಲಾಯಿಸುತ್ತಿದ್ದ ಸಾರ್ವಜನಿಕರನ್ನು ತಡೆದು ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಯಿತು.

ಗುಲಾಬಿ ಹೂವು ನೀಡಿ ಮನವಿ

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್​​​ ಶಿಂಧೆ ಮಾತನಾಡಿ, ವಿನಾ ಕಾರಣ ರಸ್ತೆಗೆ ಇಳಿಯುತ್ತಿರುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರುತ್ತಿರುವ ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಮನೆ ಬಿಟ್ಟು ಹೊರ ಬರದಂತೆ ಮನವಿ ಮಾಡುತ್ತಿದ್ದೇವೆ ಎಂದರು.

ABOUT THE AUTHOR

...view details