ಕರ್ನಾಟಕ

karnataka

ETV Bharat / state

ಕೇಳ್ರಪ್ಪೋ ಕೇಳ್ರೀ ಡಂಗೂರ,, ಅಪರಿಚಿತರು ಊರಿಗೆ ಬಂದ್ರೇ ಗ್ರಾಪಂಗೆ ಮಾಹಿತಿ ನೀಡಿ.. - ಕೊರೊನಾ ಭೀತಿ ಹಿನ್ನೆಲೆ ಹಿರೇಬಾಗೇವಾಡಿಯಲ್ಲಿ ತೀವ್ರ ಕಟ್ಟೆಚ್ಚರ

ವಿದೇಶ ಅಥವಾ ಹೊರಗಡೆಯಿಂದ ಯಾರೇ ಊರಿಗೆ ಬಂದರೂ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಲು ಡಂಗೂರ ಸಾರಿ ಅರಿವು ಮೂಡಿಸಲಾಗಿದೆ.

awareness-in-hirebagadevadi-about-corona
ಹಿರೇಬಾಗೇವಾಡಿಯಲ್ಲಿ ಡಂಗೂರ ಸಾರಿ ಜಾಗೃತಿ

By

Published : Mar 24, 2020, 12:19 PM IST

ಬೆಳಗಾವಿ :ಕೊರೊನಾ ಭೀತಿ ಹಿನ್ನೆಲೆ ಅಪರಿಚಿತರು ಯಾರೇ ಊರಿಗೆ ಬಂದರೂ ಪೊಲೀಸರ ಮೂಲಕ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಯಿತು.

ಕೇಳ್ರಪ್ಪೋ ಕೇಳಿ ಡಂಗೂರ, ಯಾರೇ ಹೊಸದಾಗಿ ಊರಿಗೆ ಬಂದ್ರೂ ಮಾಹಿತಿ ನೀಡಿ..

ಕೊರೊನಾ ವೈರಸ್​ ಭೀತಿಯಿಂದಾಗಿ ಹಿರೇಬಾಗೇವಾಡಿಯಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ನಾಳೆ ನಡೆಯುವ ಸಂತೆ ರದ್ದಾಗಿರುವುದಾಗಿ ಡಂಗೂರ ಸಾರಲಾಯಿತು. ಈಗಾಗಲೇ ರೋಗ ಹರಡದಂತೆ ತಡೆಯಲು ಗ್ರಾಪಂ ಅಗತ್ಯ ಕ್ರಮಕೈಗೊಳ್ಳಲಾಗಿದೆ‌. ವಿದೇಶ ಅಥವಾ ಹೊರಗಡೆಯಿಂದ ಯಾರೇ ಊರಿಗೆ ಬಂದರೂ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಡಂಗೂರ ಸಾರಿ ಅರಿವು ಮೂಡಿಸಲಾಗಿದೆ.

ABOUT THE AUTHOR

...view details