ಬೆಳಗಾವಿ: ಕಳೆದ ಜನವರಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿ, ಆತನ ಬಳಿಯಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ನಗರದ ಮಾಳಮಾರುತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೆ ಯತ್ನಿಸಿ, ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿ ಅರೆಸ್ಟ್ - belagavi crime news
ನ್ಯೂ ಗಾಂಧಿನಗರದ ನಿವಾಸಿ ಸಂತೋಷ ಬಿಚಗತ್ತಿ (25) ಎಂಬುವವನೇ ಬಂಧಿತ ಆರೋಪಿ. ಈತ ಜ. 31ರಂದು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರ್ಯಾಕ್ಟರ್ ಪಕ್ಕದಲ್ಲಿ ಮಲಗಿದ್ದ ಬೆಂಡೀಗೇರಿ ಗ್ರಾಮದ ರಮೇಶ ಶಿಂತ್ರಿ (26) ಎಂಬುವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಬಳಿಯಿದ್ದ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ.
ಇಲ್ಲಿನ ನ್ಯೂ ಗಾಂಧಿನಗರದ ನಿವಾಸಿ ಸಂತೋಷ ಬಿಚಗತ್ತಿ (25) ಎಂಬುವವನೇ ಬಂಧಿತ ಆರೋಪಿ. ಈತ ಜ. 31ರಂದು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಕ್ಟರ್ ಪಕ್ಕದಲ್ಲಿ ಮಲಗಿದ್ದ ಬೆಂಡೀಗೇರಿ ಗ್ರಾಮದ ರಮೇಶ ಶಿಂತ್ರಿ (26) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಬಳಿಯಿದ್ದ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ.
ಅಂದು ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಡಿಸಿಪಿ ಡಾ.ವಿಕ್ರಮ ಆಮಟೆ ಈ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದರು. ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾರ್ಕೆಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸದಾಶಿವ ಕಟ್ಟಿಮನಿಯವರ ನೇತೃತ್ವದಲ್ಲಿ ಮಾಳಮಾರುತಿ ಪಿಐ ಸುನೀಲ ಪಾಟೀಲ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯಿಂದ ದೋಚಿಕೊಂಡು ಹೋಗಿದ್ದ ಮೊಬೈಲ್ ಫೋನ್ಅನ್ನು ವಶಪಡಿಸಿಕೊಳ್ಳಲಾಗಿದೆ.