ಬೆಳಗಾವಿ:ಇಲ್ಲಿನ ಬಾಕ್ಸೈಟ್ ರಸ್ತೆಯಲ್ಲಿರುವ ಸಂತ ಜೋಸೆಫ್ ದಿ ವರ್ಕರ್ ಚರ್ಚ್‌ನ ಫಾದರ್ ಫ್ರಾನ್ಸಿಸ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ತಲ್ವಾರ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಫಾದರ್ ಫ್ರಾನ್ಸಿಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚರ್ಚ್‌ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಮಬೆ ಎದುರು ನಾಯಿ ಬರುತ್ತಿದ್ದಂತೆ ನೋಡಲು ಫಾದರ್ ಹೊರಬಂದಿದ್ದಾರೆ. ಆಗ ಮೊದಲನೇ ಮಹಡಿಯ ಬಾಗಿಲ ಬಳಿ ಬಂದಿದ್ದ ದುಷ್ಕರ್ಮಿ, ಬಾಗಿಲು ತೆಗೆದ ಫ್ರಾನ್ಸಿಸ್ ಮೇಲೆ ತಲ್ವಾರ್ ಬೀಸಿದ್ದಾನೆ. ಆತಂಕಗೊಂಡ ಫಾದರ್ ತಪ್ಪಿಸಿಕೊಂಡು ಕೆಳಕ್ಕೆ ಓಡಿಬಂದಿದ್ದಾರೆ. ಚರ್ಚ್ ಆವರಣದಲ್ಲಿದ್ದವರು ಫಾದರ್ ರಕ್ಷಣೆಗೆ ಬಂದಿದ್ದಾರೆ. ಜನರನ್ನು ನೋಡಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.