ಕರ್ನಾಟಕ

karnataka

ETV Bharat / state

ಬಿಮ್ಸ್ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ: ವೈದ್ಯಕೀಯ ಸಿಬ್ಬಂದಿಯಿಂದ ಪ್ರತಿಭಟನೆ - ಬಿಮ್ಸ್ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ

ಬಿಮ್ಸ್‌ ಆಸ್ಪತ್ರೆಯಲ್ಲಿ ಕಿರಿಯ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ತಡರಾತ್ರಿ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಿಂದ ಹೊರಬಂದು ಪ್ರತಿಭಟನೆ ನಡೆಸಿದರು.

Protest by BIMS medical staff
ಬಿಮ್ಸ್ ವೈದ್ಯಕೀಯ ಸಿಬ್ಬಂದಿಗಳಿಂದ ಪ್ರತಿಭಟನೆ

By

Published : Sep 22, 2020, 10:15 AM IST

ಬೆಳಗಾವಿ: ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದ ಬಿಮ್ಸ್‌ ಆಸ್ಪತ್ರೆ ಕಿರಿಯ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ತಡರಾತ್ರಿ ನಡೆದಿದೆ.

ಬಿಮ್ಸ್ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ: ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ

ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಗಿರೀಶ್ ದಂಡಗಿ ಅವರು ಸಿಬ್ಬಂದಿಯ ಮನವೊಲಿಸಿದರು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಚಿಕ್ಕೋಡಿ ಮೂಲದ‌ 39 ವರ್ಷದ ಮಹಿಳೆ ರಾತ್ರಿ ಬೀಮ್ಸ್ ಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮಹಿಳೆ ತಡರಾತ್ರಿ ಮೃತಪಟ್ಟಿದ್ದರು.

ಈ ವೇಳೆ ಮೃತ ಮಹಿಳೆಯ 15ಕ್ಕೂ ಹೆಚ್ಚು ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ಸಾಲದೆಂಬಂತೆ ಕರ್ತವ್ಯನಿರತ ಕಿರಿಯ ವೈದ್ಯನ ಮೇಲೆ ಚಪ್ಪಲಿಯಿಂದ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಡಾ. ಗಿರೀಶ್ ದಂಡಗಿ ಭರವಸೆ ನೀಡಿದ ಹಿನ್ನೆಲೆ ಬಿಮ್ಸ್ ಸಿಬ್ಬಂದಿ ಪ್ರತಿಭಟನೆ ವಾಪಸ್ ಪಡೆದರು.

ABOUT THE AUTHOR

...view details