ಅಥಣಿ: ಅಥಣಿ ಮತ್ತು ಮಹಾರಾಷ್ಟ್ರದ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಕೋಕಟನೂರ ಯಲ್ಲಮ್ಮ ದೇವಾಲಯ ನೀರಿನಿಂದ ಆವೃತವಾಗಿದೆ. ನಾಲ್ಕು ದಿನಗಳು ಕಳೆದರೂ ನೀರಿನಮಟ್ಟ ಇಳಿಕೆಯಾಗದೆ, ದೇವರ ದರ್ಶನಕ್ಕೆ ಅವಕಾಶವಿಲ್ಲದೆ ಭಕ್ತರಲ್ಲಿ ನಿರಾಸೆ ಮೂಡಿದೆ.
ಯಲ್ಲಮ್ಮ ದೇವಾಲಯ ಜಲಾವೃತ: ನವರಾತ್ರಿ ಅಮಾವಾಸ್ಯೆ ಆಚರಣೆಗೆ ಮಳೆ ಅಡ್ಡಿ - ದೇವಾಲಯ ಜಲಾವೃತ
ಮೂಲ ವಿಗ್ರಹದ ಎದೆಯ ಭಾಗದವರೆಗೆ ನೀರು ಹರಿಯುತ್ತಿದ್ದು, ದೇವರ ದರ್ಶನಕ್ಕೆ ಪ್ರವಾಹ ಅವಕಾಶ ನೀಡುತ್ತಿಲ್ಲ. ಮೊದಲೇ ಕೊರೊನಾದಿಂದ ಸತತ ಆರು ತಿಂಗಳು ದೇವಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ ಮಹಾ ಮಳೆಯಿಂದ ಮತ್ತೆ ದೇವರ ದರ್ಶನ ಅಸಾಧ್ಯವಾಗಿದೆ.

ಯಲ್ಲಮ್ಮ ದೇವಾಲ
ಇಂದು ನವರಾತ್ರಿ ಅಮಾವಾಸ್ಯೆ ಹಿನ್ನೆಲೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ತಾಲ್ಲೂಕಿನ ಯಲ್ಲಮ್ಮವಾಡಿ ಗ್ರಾಮಕ್ಕೆ ಭಕ್ತರು ಆಗಮಿಸಿ ಅಮಾವಾಸ್ಯೆ ಆಚರಣೆ ಮಾಡಿ ದೇವಿಯ ದರ್ಶನ ಪಡೆಯುತ್ತಿದ್ದರು. ಈ ಬಾರಿ ಅತಿಯಾದ ಮಳೆಯಿಂದ ಗರ್ಭಗುಡಿ ಜಲಾವೃತವಾದ ಕಾರಣ ದೂರದಿಂದಲೇ ಭಕ್ತರು ದೇವಿಗೆ ನಮಿಸುತ್ತಿದ್ದಾರೆ.
ಯಲ್ಲಮ್ಮ ದೇವಾಲಯ ಜಲಾವೃತ
ಮೂಲ ವಿಗ್ರಹದ ಎದೆಯ ಭಾಗದವರೆಗೆ ನೀರು ಹರಿಯುತ್ತಿದ್ದು, ದೇವರ ದರ್ಶನಕ್ಕೆ ಪ್ರವಾಹ ಅವಕಾಶ ನೀಡುತ್ತಿಲ್ಲ. ಕೊರೊನಾದಿಂದ ಸತತ ಆರು ತಿಂಗಳು ದೇವಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ ಮಹಾ ಮಳೆಯಿಂದ ಮತ್ತೆ ದೇವರ ದರ್ಶನ ಅಸಾಧ್ಯವಾಗಿದೆ.