ಕರ್ನಾಟಕ

karnataka

ETV Bharat / state

ಸಂಜೆ ಬರಬೇಕಿದ್ದ ಬಸ್​ ರಾತ್ರಿಗೆ ಆಗಮನ: ಸಾರಿಗೆ ಸಚಿವರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೈರಾಣ!

ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್​ ಬಾರದೆ ವಿದ್ಯಾರ್ಥಿಗಳು ಪರದಾಡಿದರು. ಸಂಜೆಗೆ ಬರಬೇಕಿದ್ದ ಬಸ್​ ರಾತ್ರಿ ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಹೈರಾಣಾಗಿದ್ದರು. ಇದೇ ವೇಳೆ ಸೂಕ್ತವಾದ ಬಸ್​ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

By

Published : Feb 8, 2021, 8:40 AM IST

ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಟ
Athani Students are facing bus problem

ಅಥಣಿ:ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.

ಸರಿಯಾದ ಬಸ್​ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡ ವಿದ್ಯಾರ್ಥಿಗಳು

ಅಥಣಿ-ಕಲಮಡಿ ಮಾರ್ಗವಾಗಿ ಸಂಚರಿಸುವ ಬಸ್ ಸರಿಯಾದ ಸಮಯಕ್ಕೆ ಬರದೆ ರಾಮತೀರ್ಥ ಗ್ರಾಮದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿತು. ತಾಲೂಕಿನ ರಾಮತೀರ್ಥ ಗ್ರಾಮದ ವಿದ್ಯಾರ್ಥಿಗಳು ಕಕಮರಿ ಗ್ರಾಮದ ಪ್ರೌಢಶಾಲೆಗೆ ವಿದ್ಯಾಭ್ಯಾಸ ಮಾಡಲು ದಿನನಿತ್ಯ 7 ಕಿ.ಮೀ ದೂರ ಸಂಚಾರ ಮಾಡುತ್ತಾರೆ. ಪ್ರತಿದಿನ ಸಂಜೆ 5 ಗಂಟೆಗೆ ಬಸ್​​ ಬರುತ್ತಿತ್ತು. ಆದರೆ ಕಳೆದೊಂದು ವಾರದಿಂದ ಸಮಯಕ್ಕೆ ಸರಿಯಾಗಿ ಬಸ್​ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳ ಪರದಾಟ

ನಾವು ರಾಮತೀರ್ಥ ಗ್ರಾಮದಿಂದ ಕಕಮರಿ ಗ್ರಾಮಕ್ಕೆ ಶಾಲೆಗೆ ಬರುತ್ತೇವೆ. ನಮ್ಮ ಊರಿನಿಂದ ಹಾಗೂ ಮುರಳಿ ಶಾಲೆಯಿಂದ ಮನೆಗೆ ಹೋಗಬೇಕಾದರೆ ಸರಿಯಾದ ಸಮಯದಲ್ಲಿ ಬಸ್​ ಬರುವುದಿಲ್ಲ. ಇದು ನಮಗೆ ಹಾಗೂ ನಮ್ಮ ಪಾಲಕರಿಗೆ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಿಂದ ನಮ್ಮ ಮನೆ ದೂರ ಇರುವುದರಿಂದ ಕತ್ತಲೆಯಲ್ಲಿ ನಾವು ನಡೆದುಕೊಂಡು ಹೊಗುವಾಗ ತುಂಬಾ ಹೆದರಿಕೆ ಆಗುತ್ತದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಬಸ್​​ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಬಸ್ ವಿಳಂಬಕ್ಕೆ ಕಾರಣ:

ಸ್ಥಳೀಯರ ಮಾಹಿತಿ ಪ್ರಕಾರ ಪ್ರಮುಖವಾಗಿ ಈ ಭಾಗದಲ್ಲಿನ ರಸ್ತೆಗಳು ಸರಿಯಿಲ್ಲ. ಅಷ್ಟೇ ಅಲ್ಲದೆ ಬಸ್ ಕೂಡ ರಿಪೇರಿಲ್ಲಿದೆ. ಎಲ್ಲಿ ಬೇಕಾದರೂ ಕೆಟ್ಟು ನಿಲ್ಲುತ್ತದೆ. ಇದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details