ಕರ್ನಾಟಕ

karnataka

ETV Bharat / state

ಪಥ ಸಂಚಲನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸರು​ - Covid 19

ಅಥಣಿಯ ಐಗಳಿ ಠಾಣೆಯ ಪಿಎಸ್ಐ ಕೆ. ಎಸ್. ಕೊಚೆರಿ ನೇತೃತ್ವದಲ್ಲಿ ಮೂವತ್ತು ಪೊಲೀಸ್ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಿದರು.

Athani police spreading awareness about covid 19
ಪಥಸಂಚಲನ ಮಾಡಿ ಕೊರೊನಾ ಹರಡುವ ಬಗ್ಗೆ ಜಾಗೃತಿ ಮೂಡಿಸಿದ ಪೊಲೀಸ್​

By

Published : Apr 8, 2020, 2:41 PM IST

ಅಥಣಿ:ಕೋವಿಡ್ 19 ಹಿನ್ನೆಲೆ ಜನರಲ್ಲಿ ಜಾಗೃತಿ ಜೊತೆಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆರಕ್ಷಕರು ತೆಲಂಸಗ್ ಗ್ರಾಮದಲ್ಲಿ ಪಥಸಂಚಲನ ನಡೆಸಿದರು.

ಪಥಸಂಚಲನ ಮಾಡಿ ಕೊರೊನಾ ಹರಡುವ ಬಗ್ಗೆ ಜಾಗೃತಿ ಮೂಡಿಸಿದ ಪೊಲೀಸ್​

ಐಗಳಿ ಠಾಣೆಯ ಪಿಎಸ್ಐ ಕೆ. ಎಸ್. ಕೊಚೆರಿ ನೇತೃತ್ವದಲ್ಲಿ ಮೂವತ್ತು ಪೊಲೀಸ್ ಸಿಬ್ಬಂದಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಿದರು.

ಇದೆ ವೇಳೆ, ಪಿಎಸ್ಐ ಕೆ. ಎಸ್. ಕೊಚೆರಿ ಮಾತನಾಡಿ, ಮಹಾಮಾರಿ ಕೊರೊನಾ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಅನಗತ್ಯವಾಗಿ ಓಡಾಡದೇ ಮನೆಯಲ್ಲಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅಡ್ಡಾಡುವ ಗುಂಪುಗಳ ಬಗ್ಗೆ ಮೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ಮಾಡಲಾಗುತ್ತಿದ್ದು, ಅಂತವರಿಗೆ ಶಿಕ್ಷೆ ವಿಧಿಸಲಾಗುವುದು. ಕಾನೂನಿನ ಕ್ರಮಕ್ಕೆ ಅವಕಾಶ ಕೊಡದೇ ಮನೆಯಲ್ಲಿಯೇ ಇರಬೇಕು. ಇಲ್ಲವಾದಲ್ಲಿ ಜೈಲು ಸೇರಲು ಸಿದ್ದರಾಗಿ ಎಂದು ಪಿಎಸ್‌ಐ ಕೆ ಎಸ್ ಕೊಚೆರಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details