ಅಥಣಿ: ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯ ಸಂದರ್ಭದಲ್ಲಿ ಯಾವುದೇ ಗಲಾಟೆ ನಡೆಯದೇ ಶಾಂತಿಪಾಲನೆ ಮಾಡುವಂತೆ ಸಾರ್ಜನಿಕ ಮುಖಂಡರಿಗೆ ಡಿವೈಎಸ್ಪಿ ಎಚ್.ವಿ ಗಿರೀಶ್ ಸಭೆ ನಡೆಸಿದರು.
ಟಿಪ್ಪು ಜಯಂತಿ: ಶಾಂತಿ ಕಾಪಾಡುವಂತೆ ಅಥಣಿ ಪೊಲೀಸರ ಮನವಿ - athani police request to people celabrate peacefull tippu birthday
ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಶಾಂತಿಪಾಲನಾ ಸಭೆಯನ್ನು ಅಥಣಿ ಪಟ್ಟಣದ ಕಾಲೇಜೊಂದರಲ್ಲಿ ಹಮ್ಮಿಕೊಳ್ಳಲಾಗಿತ್ತು.
![ಟಿಪ್ಪು ಜಯಂತಿ: ಶಾಂತಿ ಕಾಪಾಡುವಂತೆ ಅಥಣಿ ಪೊಲೀಸರ ಮನವಿ](https://etvbharatimages.akamaized.net/etvbharat/prod-images/768-512-4997132-thumbnail-3x2-ggg.jpg)
ಪಟ್ಟಣದ ಎಸ್. ಎಮ್. ಕಾಲೇಜಿನಲ್ಲಿ ಸಾರ್ವಜನಿಕ ಮುಖಂಡರ ಸಭೆ ನಡೆಸಲಾಯಿತು. ಪಟ್ಟಣದ ವ್ಯಾಪಾರಿಗಳು, ಸಾರ್ವಜನಿಕರು ಮತ್ತು ವಿವಿಧ ಧರ್ಮದ ಮುಖಂಡರು ಮತ್ತು ಕನ್ನಡಪರ ಸಂಘಟನೆ ಮುಖಂಡರು ಸಭೆಗೆ ಹಾಜರಾಗಿದ್ದರು. ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ತ ಪಟ್ಟಣದಲ್ಲಿ ಶಾಂತಿಯುತವಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ಎಂದು ಸಂಬಂಧಪಟ್ಟ ಮುಖಂಡರಿಗೆ ಮನವಿ ಮಾಡಿದರು.
ಬಾಬ್ರಿ ಮಸೀದಿ ಹಾಗೂ ರಾಮಮಂದಿರ ಕುರಿತಾಗಿ ಸುಪ್ರೀಂ ತೀರ್ಪು ಹಿನ್ನೆಲೆ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸರ್ಕಾರದ ನಿರ್ಧಾರಕ್ಕೆ ಬೆಲೆ ಕೊಟ್ಟು ಟಿಪ್ಪು ಜಯಂತಿಯನ್ನ ಸೌಹಾರ್ದಯುತವಾಗಿ ಸಂಜೆ ನಾಲ್ಕು ಗಂಟೆ ಒಳಗಾಗಿ ಶಾಂತಿಯುತ ಮೆರವಣಿಗೆ ನಡೆಸಬೇಕು ಎಂದು ಸೂಚನೆ ನೀಡಿದರು.