ಅಥಣಿ: ತಾಲೂಕಿನ ಹಾಗು ಸುತ್ತಮುತ್ತಲಿನ ಮೊಬೈಲ್ ಟವರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಅಥಣಿ ಮತ್ತು ಐಗಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಥಣಿ: ಮೊಬೈಲ್ ಟವರ್ ಬ್ಯಾಟರಿ ಎಗರಿಸುತ್ತಿದ್ದ ಖದೀಮರ ತಂಡ ಅರೆಸ್ಟ್ - mobile tower battery theft case of athani
ಬೆಳಗಾವಿ ಜಿಲ್ಲೆಯ ಪೊಲೀಸರು ಮೊಬೈಲ್ ಟವರ್ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಸುಕುಮಾರ ಭೀಮಪ್ಪ ಬಡಿಗೇರ, ಶಶಿಕಾಂತ ಸುರೇಶ ಶೀಬಾಗೊಳ, ಶ್ರೀಶೈಲ ಮಲ್ಲಪ್ಪಾ ದೇಸಾಯ, ಅನೀಲ ನಬಿಸಾಬ ಶಿಕ್ಕಲಗಾರ ಬಂಧಿತರು.
ಅಥಣಿ: ಮೊಬೈಲ್ ಟವರ್ ಬ್ಯಾಟರಿ ಎಗರಿಸುತ್ತಿದ್ದ ಖದೀಮರ ತಂಡ ಅಂದರ್!
ನಂದಗಾಂವ್ನ ಸುಕುಮಾರ ಭೀಮಪ್ಪ ಬಡಿಗೇರ, ಶಶಿಕಾಂತ ಸುರೇಶ ಶೀಬಾಗೊಳ, ಸವದಿಯ ಶ್ರೀಶೈಲ ಮಲ್ಲಪ್ಪಾ ದೇಸಾಯ, ಮುಧೋಳದ ಅನೀಲ ನಬಿಸಾಬ ಶಿಕ್ಕಲಗಾರ ಬಂಧಿತರು.
ಆರೋಪಿಗಳ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ 3, ರಾಯಬಾಗ ಪೊಲೀಸ್ ಠಾಣೆಯಲ್ಲಿ 3 ಮತ್ತು ಕುಡಚಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು, ಹೀಗೆ ಒಟ್ಟು 14 ಮೊಬೈಲ್ ಟವರ್ ಬ್ಯಾಟರಿ ಕಳ್ಳತನ ಪ್ರಕರಣಗಳನ್ನು ದಾಖಲಿಸಲಾಗಿದೆ.