ಕರ್ನಾಟಕ

karnataka

ETV Bharat / state

ಅಥಣಿ ಶಾಸಕ ಮಹೇಶ ಕುಮಟಳ್ಳಿ ಅನರ್ಹ: ಟಿಕೇಟ್​​​ಗಾಗಿ ಕಸರತ್ತು - Athani MLA Mahesh Kumatalli ineligible

ಅಥಣಿ ಮತಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡ ವಿದ್ಯಮಾನ ಆ ಕ್ಷೇತ್ರದಲ್ಲಿ ಹಿಂದೆಂದೂ ನಡೆದಿರಲಿಲ್ಲ. ಇವರ ಮೇಲೆ ಅಥಣಿ ಮತಕ್ಷೇತ್ರದ ಜನರು ಅಪಾರ ವಿಶ್ವಾಸವಿಟ್ಟು ಈ ಭಾಗದ ಜನರಿಗೆ ಯಾವುದಾದರೂ ಯೋಜನೆಗಳನ್ನು ತಂದು ಅನುಕೂಲ ಮಾಡುತ್ತಾರೆ ಎನ್ನುವ ನಿರೀಕ್ಷೆ ಇಟ್ಟಿದ್ದ ಜನರಿಗೆ ಈಗ ನಿರಾಸೆ ಮೂಡಿಸಿದ್ದಾರೆ ಕುಮಟಳ್ಳಿ.

ಮಹೇಶ ಕುಮಟಳ್ಳಿ.

By

Published : Jul 27, 2019, 5:30 PM IST

ಚಿಕ್ಕೋಡಿ : ಸತತವಾಗಿ ಹದಿನೈದು ವರ್ಷಗಳಿಂದ ಬಿಜೆಪಿಯ ಮಾಜಿ ಶಾಸಕ ಲಕ್ಷ್ಮಣ ಸವದಿ ತೆಕ್ಕೆಯಲ್ಲಿ ಅಥಣಿ ಮತಕ್ಷೇತ್ರವಿತ್ತು. ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹೇಶ ಕುಮಟಳ್ಳಿ ಆಯ್ಕೆಯಾಗಿದ್ದರು. ಇದೀಗ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದರೊಂದಿಗೆ ಅಥಣಿ ಮತಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಕುರಿತ ಚರ್ಚೆಗಳು ಆರಂಭಗೊಂಡಿವೆ.

ಅಥಣಿ ಮತಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡ ವಿದ್ಯಮಾನ ಆ ಕ್ಷೇತ್ರದಲ್ಲಿ ಹಿಂದೆಂದೂ ನಡೆದಿರಲಿಲ್ಲ. 2013 ರಲ್ಲಿ ಸೋತಿದ್ದ ಮಹೇಶ ಕುಮಟಳ್ಳಿ ಮೊದಲ ಬಾರಿಗೆ ಅಂದರೆ 2018 ರಲ್ಲಿ ಗೆಲುವು ಸಾಧಿಸಿ, ವಿಧಾನಸಭೆ ಪ್ರವೇಶಿಸಿದ್ದರು.

ಇವರ ಮೇಲೆ ಅಥಣಿ ಮತಕ್ಷೇತ್ರದ ಜನರು ಅಪಾರ ವಿಶ್ವಾಸವಿಟ್ಟು ಈ ಭಾಗದ ಜನರಿಗೆ ಯಾವುದಾದರೂ ಯೋಜನೆಗಳನ್ನು ತಂದು ಅನುಕೂಲ ಮಾಡುತ್ತಾರೆ ಎನ್ನುವ ನೀರಿಕ್ಷೆ ಇಟ್ಟಿದ್ದರು. ಆದರೆ ಇಲ್ಲಿನ ಮತದಾರರಿಗೆ ಇದೀಗ ನಿರಾಸೆ ಮೂಡಿಸಿದ್ದಾರೆ ಕುಮಟಳ್ಳಿ. ಇದರೊಂದಿಗೆ ಅಲ್ಲಿನ ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಮತ್ತು ಜನರ ಅಸಮಾಧಾನಕ್ಕೂ ತುತ್ತಾಗಿದ್ದಾರೆ. ಅಥಣಿ ಮತಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ನಡೆಯದಂತಹ ಘಟನೆಗಳಿಗೆ ಮಹೇಶ ಕುಮಟಳ್ಳಿ ಕಾರಣವಾಗಿದ್ದಾರೆ.

ಈ ಮೂಲಕ ಅವರು ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ, ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಮತದಾರರ ನಂಬಿಕೆಯನ್ನೂ ಉಳಿಸಿಕೊಳ್ಳಲಿಲ್ಲ ಎಂದು ಈ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಉಪಚುನಾವಣೆಗೆ ತೆರೆ ಮರೆಯಲ್ಲಿ ತಯಾರಿ :

ಒಂದು ವೇಳೆ ಅಥಣಿ ಮತಕ್ಷೇತ್ರದಲ್ಲಿ ಮರು ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಸವರಾಜ ಬುಟಾಳೆ, ಮಾಜಿ ಶಾಸಕರಾಗಿರುವ ಶಹಜಹಾನ್ ಡೊಂಗರಗಾಂವ, ಗಜಾನನ ಮಂಗಸೂಳಿ, ಸತ್ಯಪ್ಪ ಬಾಗೆನ್ನವರ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ‌ನೀಡುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ABOUT THE AUTHOR

...view details