ಅಥಣಿ : ಕೇವಲ ಬಾಯಿ ಮಾತಿಗೆ ಮಾತ್ರ ಸೈನಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಜನರ ಮಧ್ಯೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮದ ವ್ಯಕ್ತಿಯೊಬ್ಬ ದೇಶ ಕಾಯೋ ಯೋಧರಿಗೆ ತನ್ನ ಹೊಟೇಲ್ನಲ್ಲಿ ಉಚಿತ ಊಟ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ದೇಶ ಕಾಯೋ ಯೋಧರಿಗೆ ಇಲ್ಲಿ ಉಚಿತ ಊಟೋಪಹಾರ ಯಾಕೆ ಅಂತೀರಾ..? - Free meal for soldiers at Athani hotel
ದರೂರ ಗ್ರಾಮದ ಗುರುರಾಜ ಗಳತಗಿ ಎಂಬವವರು ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದು, ಇವರ ಹೊಟೇಲ್ಗೆ ಯಾರೇ ಸೈನಿಕರು ಬಂದರೂ ಉಚಿತವಾಗಿ ಉಟೋಪಹಾರ ನೀಡುತ್ತಾರೆ. ಈ ಮೂಲಕ ಸೈನಿಕರ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ.
![ದೇಶ ಕಾಯೋ ಯೋಧರಿಗೆ ಇಲ್ಲಿ ಉಚಿತ ಊಟೋಪಹಾರ ಯಾಕೆ ಅಂತೀರಾ..? Athani Hotel, which offers free meals to soldiers](https://etvbharatimages.akamaized.net/etvbharat/prod-images/768-512-5312599-thumbnail-3x2-hrs.jpg)
ದೇಶ ಕಾಯೋ ಯೋಧರಿಗೆ ಉಚಿತ ಊಟ
ದೇಶ ಕಾಯೋ ಯೋಧರಿಗೆ ಉಚಿತ ಊಟ
ದರೂರ ಗ್ರಾಮದ ಗುರುರಾಜ ಗಳತಗಿ ಎಂಬುವವರು ಸಣ್ಣ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದು, ಇವರ ಹೋಟೆಲ್ಗೆ ಯಾರೇ ಸೈನಿಕರು ಬಂದರೂ ಉಚಿತವಾಗಿ ಉಟೋಪಹಾರ ನೀಡುತ್ತಾರೆ. ಈ ಮೂಲಕ ಸೈನಿಕರ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಾರೆ.
ಈ ಬಗ್ಗೆ ಗುರುರಾಜ ಗಳತಗಿಯವರನ್ನು ಕೇಳಿದ್ರೆ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮಗೋಸ್ಕರ, ದೇಶಕ್ಕೋಸ್ಕರ ಹೋರಾಡುವ ಸೈನಿಕರಿಗೆ ನನ್ನ ಕಡೆಯಿಂದ ಸಣ್ಣದೊಂದು ಅಳಿಲು ಸೇವೆ ಮಾಡುತ್ತಿದ್ದೇನೆ, ಈ ಬಗ್ಗೆ ನನಗೆ ಖುಷಿಯಿದೆ ಎನ್ನುತ್ತಾರೆ.