ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಮೇ 26 ರಂದು ಒಂದೇ ದಿನ ಜಾರ್ಖಂಡ್ ಪ್ರವಾಸದಿಂದ ಹಿಂದಿರುಗಿದ 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯರ ತಂಡದಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಮೇ 30 ರಂದು ಡಿಸಿಎಂ ಲಕ್ಷ್ಮಣ ಸವದಿ ಅವರು ತಾಲೂಕಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಉದ್ಘಾಟನೆ ಮಾಡಿದ್ದರು. ಅದರಂತೆ ತಾಲೂಕಿನ ನಂದಗಾವ್, ಸವದಿ, ಖವಟಗೊಪ್ಪ ಹಾಗೂ ಝುಂಜರವಾಡ ಈ 4 ಗ್ರಾಮಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಮುಖಾಂತರ ವೈದ್ಯರ ತಂಡ ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಕೊರೊನಾ ಆತಂಕ : ಅಥಣಿಯಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಮೂಲಕ ಆರೋಗ್ಯ ತಪಾಸಣೆ
ಅಥಣಿ ತಾಲೂಕಿನ ನಂದಗಾವ್, ಸವದಿ, ಖವಟಗೊಪ್ಪ ಹಾಗೂ ಝುಂಜರವಾಡ ಗ್ರಾಮದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಮೂಲಕ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಮೊಬೈಲ್ ಫೀವರ್ ಕ್ಲಿನಿಕ್ ಮೂಲಕ ಆರೋಗ್ಯ ತಪಾಸಣೆ
ತಾಲೂಕಿನ ಈ 4 ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದಂತೆ, ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ತಪಾಸಣೆ ಮಾಡಲಾಗಿದೆ.