ಕರ್ನಾಟಕ

karnataka

ETV Bharat / state

ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ  ಅಥಣಿ ಭಾಗದ ನಿರಾಶ್ರಿತರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಕನ್ನಡ ಶಾಲೆಯಲ್ಲಿ ತಂಗಿರುವ ನಿರಾಶ್ರಿತರು ಹಾಗೂ ಅಥಣಿ ತಾಲೂಕಿನ ಕವಟಗೊಪ್ಪ, ಮತ್ತು ಶೇಗುಣಸಿ ಗ್ರಾಮದ ನಿರಾಶ್ರಿತರಿಗೆ ತಿನ್ನಲು ಅನ್ನವಿಲ್ಲದೇ ಮಂಡಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ತುತ್ತು ಅನ್ನಕ್ಕೂ ಪರಿತಪ್ಪಿಸುತ್ತಿರುವ ಅಥಣಿ ಭಾಗದ ನಿರಾಶ್ರಿತರು

By

Published : Aug 22, 2019, 11:40 AM IST

ಚಿಕ್ಕೋಡಿ:ಅಧಿಕಾರಿಗಳು ನಿನ್ನೆ ರಾತ್ರಿ ನಿರಾಶ್ರಿತರ ಕೇಂದ್ರದಲ್ಲಿ ಊಟ ಬಂದ್​ ಮಾಡಿದ ಹಿನ್ನೆಲೆಯಲ್ಲಿ ಸಂತ್ರಸ್ತರು ಕೇವಲ ಮಂಡಕ್ಕಿ ತಿಂದು ಮಲಗಿದರು.

ತುತ್ತು ಅನ್ನಕ್ಕೂ ಪರಿತಪ್ಪಿಸುತ್ತಿರುವ ಅಥಣಿ ಭಾಗದ ನಿರಾಶ್ರಿತರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಕನ್ನಡ ಶಾಲೆಯಲ್ಲಿ ತಂಗಿರುವ ನಿರಾಶ್ರಿತರು ಹಾಗೂ ಅಥಣಿ ತಾಲೂಕಿನ ಕವಟಗೊಪ್ಪ, ಮತ್ತು ಶೇಗುಣಸಿ ಗ್ರಾಮದ ನಿರಾಶ್ರಿತರಿಗೆ ತಿನ್ನಲು ಅನ್ನವಿಲ್ಲದೇ ಮಂಡಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಹೌದು, ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಸ್ಥರಿಗೆ ಅಧಿಕಾರಿಗಳು ಸರಿಯಾಗಿ ಊಟ ನೀಡುತ್ತಿಲ್ಲ. ಬದಲಿಗೆ ಅವರ ನೋವು ಆಲಿಸದ ಅಧಿಕಾರಿಗಳು ಮತ್ತು ಶೇಗುಣಸಿ ಗ್ರಾಮ ಪಂಚಾಯತ್​ ಅಧ್ಯಕ್ಷರು, ಸದಸ್ಯರು ನಿರಾಶ್ರಿತರ ಕೇಂದ್ರದಲ್ಲಿ ಅಡುಗೆ ಬಂದ್​ ಮಾಡಿಸಿದ್ದಾರೆ.

ಇನ್ನೂ ಪಕ್ಕದ ಕೋಳಿಗುಡ್ಡ ಗ್ರಾಮದ ಜನರು ಮಂಡಕ್ಕಿ, ಚೂಡಾ, ಕೇವಲ ನೀಡಿದ್ದನ್ನೇ ತಿಂದು ಮಲಗುತ್ತಿರುವ ಸ್ಥಿತಿ ಸಾಮಾನ್ಯವಾಗಿದೆ. ಒಟ್ಟಾರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರಾಶ್ರಿತರು ಹಸಿವಿನಿಂದ ಕಂಗೆಟ್ಟಿದ್ದಾರೆ.

ABOUT THE AUTHOR

...view details