ಅಥಣಿ/ಬೆಳಗಾವಿ: ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳೆ ಬಂಡಾಯ ಬಾವುಟ ಹಾರಿಸುವ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಹಿಂಪಡೆಯುವ ಮಾತೇ ಇಲ್ಲ.. ಸದಾಶಿವ ಬುಟಾಳೆ ಸ್ಪಷ್ಟನೆ - sadashiva batale filed nomination
ಅಥಣಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸದಾಶಿವ ಬುಟಾಳೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ ಆಗಿದ್ದರಿಂದ ಹಲವು ನಾಯಕರು ನಾಮಪತ್ರ ಸಲ್ಲಿಸಿದರು. ಅದೇ ರೀತಿ ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳೆ ಕೂಡ ನಾಮಪತ್ರ ಸಲ್ಲಿಸಿದ್ರು. ಸದಾಶಿವ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಕೈತಪ್ಪಿದ್ದಕ್ಕೆ, ಅಸಮಾಧಾನದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿ ಹೊರ ಬಂದ ಸದಾಶಿವ ಬುಟಾಳೆ, ಮಾಧ್ಯಮದವರ ಜೊತೆ ಮಾತನಾಡುತ್ತಾ ಕಾಂಗ್ರೆಸ್ನಿಂದ ಅಸಮಾಧಾನಗೊಂಡು ನಾಮಪತ್ರ ಸಲ್ಲಿಸಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ ನಾನು ಜಯಭೇರಿ ಸಾಧಿಸುವುದು ಶತಸಿದ್ಧ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ತೆಗೆದುಕೊಳ್ಳಲ್ಲ ಎಂದ್ರು. ಎಂಬಿ ಪಾಟೀಲ್ ಅವರು ನನಗೆ ಕರೆ ಮಾಡಿದ್ದಾರೆ , ಮನೆಗೆ ಬರುವುದಾಗಿ ಹೇಳಿದ್ದಾರೆ. ಆದರೆ, ನಾನು ನನ್ನ ಮನೆಗೆ ಬರೋಕೆ ಬೇಡ ಅನ್ನಲ್ಲ. ಆದರೆ, ನಾಮಪತ್ರ ವಾಪಸ್ ಪಡೆಯಿರಿ ಅಂತೀ ಹೇಳಿದರೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ರು.