ಅಥಣಿ/ಬೆಳಗಾವಿ: ನಾಳೆ ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಅಭ್ಯರ್ಥಿಗಳ ಹಾರ್ಟ್ ಬೀಟ್ ಹೆಚ್ಚಾಗಿದೆ.
ನಾಳೆ ಉಪ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ - athani by election candiadates latest news
ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೌಂಟ್ಡೌನ್ ಶುರುವಾಗಿದ್ದು, ಅಭ್ಯರ್ಥಿಗಳ ಹಾರ್ಟ್ ಬೀಟ್ ಹೆಚ್ಚಾಗಿದೆ.
ನಾಳೆ ಹೊರಬೀಳಲಿರುವ ಉಪ ಚುನಾವಣೆ ರಿಸಲ್ಟ್ ನಂತರ ರಾಜ್ಯ ಸರ್ಕಾರ ಅಳಿವು ಉಳಿವಿನ ಪ್ರಶ್ನೆಗೆ ತೆರೆ ಬೀಳಲಿದೆ. ಅಥಣಿ ಕ್ಷೇತ್ರ ಉಪ ಚುನಾವಣೆಯ ಫಲಿತಾಂಶಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ತಮ್ಮ ಕಾರ್ಯಕರ್ತರ ಜೊತೆ ಯಾವ ಗ್ರಾಮದಲ್ಲಿ ನಮಗೆ ಹೆಚ್ಚು ಮತಗಳು ಬರುತ್ತೆ ಎಂಬ ನಿರೀಕ್ಷೆ ಜೊತೆಗೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಒಟ್ಟಾರೆ ಅಥಣಿ ಕ್ಷೇತ್ರದಿಂದ ಎಂಟು ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅದರಲ್ಲಿ ನೇರಾನೇರ ಸ್ಪರ್ಧೆ ಇರೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಈ ಹಿನ್ನೆಲೆ ಗೆಲುವಿನ ಲೆಕ್ಕಾಚಾರ ಜೋರಾಗೇ ನಡೀತಿದೆ ಎನ್ನಲಾಗಿದೆ.