ಬೆಳಗಾವಿ:ಅಥಣಿ ತಾಲೂಕಿನ ಉಪ ಚುನಾವಣೆಯ ಮತದಾನ ಭರದಿಂದ ಸಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಪ್ರಕ್ರಿಯೆ ಜರುಗುತ್ತಿದೆ.
88ರ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದಲೇ ಹಕ್ಕು ಚಲಾಯಿಸಿದ ವೃದ್ಧೆ - ಅಥಣಿಯಲ್ಲಿ ಭರದಿಂದ ಸಾಗಿದೆ ಮತ ಚಲಾವಣೆ
ಅಥಣಿ ಕ್ಷೇತ್ರದ ಕೊಕಟನೂರ ಮತ ಗಟ್ಟೆ 136ರಲ್ಲಿ 88 ವರ್ಷದ ವೃದ್ಧೆ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮತದಾನದ ನಂತರ ಮಾತನಾಡಿದ ಅಜ್ಜಿ ಎಲ್ಲರೂ ಮತಚಲಾವಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಅಥಣಿಯಲ್ಲಿ ಭರದಿಂದ ಸಾಗಿದೆ ಮತ ಚಲಾವಣೆ : ಹಕ್ಕು ಚಲಾಯಿಸಿದ 88ರ ವೃದ್ದೆ
ವಿಶೇಷ ಅಂದ್ರೆ ಅಥಣಿ ಕ್ಷೇತ್ರದ ಕೊಕಟನೂರ ಮತ ಗಟ್ಟೆ ಸಂಖ್ಯೆ 136ರಲ್ಲಿ 88 ವರ್ಷದ ವೃದ್ಧೆ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮತದಾನದ ನಂತರ ಮಾತನಾಡಿದ ಅಜ್ಜಿ ಎಲ್ಲರೂ ಮತ ಚಲಾವಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಆದ್ರೆ, ಇದೇ ಮತಗಟ್ಟೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಅಪ್ರಾಪ್ತ ಬಾಲಕನನ್ನು ಚುನಾವಣಾ ಅಧಿಕಾರಿಗಳು ಚುನಾವಣಾ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಮಕ್ಕಳು ಮತಗಟ್ಟೆಯೊಳಗೆ ಪ್ರವೇಶವಿಲ್ಲವಾದ್ರು ಈ ರೀತಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.