ಕರ್ನಾಟಕ

karnataka

ETV Bharat / state

ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನೆ.. ಇದು ಈಟಿವಿ ಭಾರತ ವರದಿ ಫಲಶ್ರುತಿ

ಇಂದು ಸಂಜೆ 6 ಗಂಟೆ ನಂತರ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅಥಣಿಯ ನೂತನ ಬಸ್​ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ.

ಅಥಣಿ ಬಸ್​ ನಿಲ್ದಾಣ

By

Published : Oct 19, 2019, 6:17 PM IST

ಅಥಣಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ತಾಲೂಕಿನ ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ ದೊರೆಯುತ್ತಿದೆ. ಮದುವಣಗಿತ್ತಿಯಂತೆ ಬಸ್​ ನಿಲ್ದಾಣ ಶೃಂಗಾರಗೊಂಡಿದ್ದು ಎಲ್ಲರನ್ನು ಆಕರ್ಷಿಸುತ್ತಿದೆ.

ಇಂದು ಉದ್ಘಾಟನೆಗೊಳ್ಳಲಿರುವ ಅಥಣಿ ಬಸ್​ ನಿಲ್ದಾಣ..

ಈಟಿವಿ ಭಾರತ ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಬಸ್ ನಿಲ್ದಾಣ ಕಾರ್ಯ ಮುಗಿದರೂ ಉದ್ಘಾಟನೆ ವಿಳಂಬ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಬಿತ್ತರಿಸಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ಎರಡು ದಿನದಲ್ಲಿ ಬಸ್ ನಿಲ್ದಾಣದ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ​ಮಾಡಿದ್ದಾರೆ.

ಉಪಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಬಸ್ ನಿಲ್ದಾಣ ಉದ್ಘಾಟನೆ ದಿನಾಂಕ ಮುಂದೂಡಲಾಗಿತ್ತು. ಸದ್ಯ ಇಂದು ಸಂಜೆ 6 ನಂತರ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಸಾರಿಗೆ ಸಚಿವರಾಗಿರುವ ಲಕ್ಷ್ಮಣ್ ಸವದಿ ಉದ್ಘಾಟನೆ ಮಾಡಲಿದ್ದು, ಅವರಿಗೆ ಸಚಿವ ಸಂಪುಟದ ಸದಸ್ಯರು ಸಾಥ್​ ನೀಡಲಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ತಾಲೂಕಿನ ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಸುರೇಶ ಅಂಗಡಿ, ರಾಜ್ಯ ಕೈಗಾರಿಕಾ ಮಂತ್ರಿ ಜಗದೀಶ್​ ಶೆಟ್ಟರ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ವಿ ಎಸ್ ಪಾಟೀಲ್ ಮುಂತಾದವರು ಭಾಗವಹಿಸಲಿದ್ದಾರೆ.

ABOUT THE AUTHOR

...view details