ಕರ್ನಾಟಕ

karnataka

ETV Bharat / state

ಕುಮಟಳ್ಳಿಗೆ ಟಿಕೆಟ್​ ಫೈನಲ್​.. ನಿಜವಾಯ್ತು ಈಟಿವಿ ಭಾರತ ವರದಿ - ಅಥಣಿಯಿಂದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್

ಕುಮಟಳ್ಳಿಗೆ ಬಿಜೆಪಿ ಟಿಕೆಟ್​ ಫಿಕ್ಸ್​ ಎಂದು ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ವರದಿ ಮಾಡಿತ್ತು. ಅದರಂತೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಹಿನ್ನಡೆಯಾಗಿದ್ದು, ಕುಮಟಳ್ಳಿ ಗೆಲ್ಲಿಸುವ ಜವಾಬ್ದಾರಿ ಅವರ ಹೆಗಲಿಗೇರಿದೆ.

ಮಹೇಶ ಕುಮಟಳ್ಳಿ

By

Published : Nov 14, 2019, 4:05 PM IST

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್​ ನೀಡಲಾಗುತ್ತದೆ ಎಂದು ಕಳೆದ ಎರಡು ತಿಂಗಳ ಹಿಂದೆ ಈಟಿವಿ ಭಾರತ ಮಾಡಿದ್ದ ವರದಿ ನಿಜವಾಗಿದೆ.

ಕುಮಟಳ್ಳಿಗೆ ಬಿಜೆಪಿ ಟಿಕೆಟ್​ ಫಿಕ್ಸ್​ ಎಂದು ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ವರದಿ ಮಾಡಿತ್ತು. ಅದರಂತೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಹಿನ್ನಡೆಯಾಗಿದ್ದು, ಕುಮಟಳ್ಳಿ ಗೆಲ್ಲಿಸುವ ಜವಾಬ್ದಾರಿ ಅವರ ಹೆಗಲಿಗೇರಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ತಿಳಿದು ಬಂದಿಲ್ಲ. ಇದೇ ನವೆಂಬರ್ 11 ರಿಂದ ನಾಮಪತ್ರ ಸಲ್ಲಿಕೆ ಜಾರಿಯಲ್ಲಿದ್ದರೂ ಇದುವರೆಗೆ ರಾಷ್ಟ್ರೀಯ ಪಕ್ಷದ ಒಬ್ಬ ಅಭ್ಯರ್ಥಿ ಕೂಡ ನಾಮಪತ್ರ ಸಲ್ಲಿಸಿಲ್ಲ.

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಯಾರಿಗೆ ಸಿಗುತ್ತೆ ಎಂಬುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ABOUT THE AUTHOR

...view details