ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲಿ ಅವರ ಸ್ವಕ್ಷೇತ್ರದ ಜನರೇ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಡಿಸಿಎಂ ಸವದಿ ಸ್ವಕ್ಷೇತ್ರದ ಜನ ಮಹಾರಾಷ್ಟ್ರದಲ್ಲಿ ಲಾಕ್... ಮರಳಿ ಗ್ರಾಮಕ್ಕೆ ಬರಲು ಪರದಾಟ - ಅಥಣಿ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಲಾಕ್ಡೌನ್
ಡಿಸಿಎಂ ಲಕ್ಷ್ಮಣ ಸವದಿ ಸ್ವಕ್ಷೇತ್ರದ ಜನರು ಮಹಾರಾಷ್ಟ್ರದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಮರಳಿ ಗ್ರಾಮಕ್ಕೆ ಬರುವುದಕ್ಕೆ ಪರದಾಡುವಂತಾಗಿದೆ.
ಅಥಣಿ ತಾಲೂಕಿನ ತೆಲಸಂಗ, ಪಡತಾರವಾಡಿ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿನ 400ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳೋದಕ್ಕೆ ಹರಸಾಹಸ ಮಾಡ್ತಿದಾರೆ. ಕಲ್ಲು ಗಣಿ ಸೇರಿದಂತೆ ವಿವಿಧೆಡೆ ಕೆಲಸ ಮಾಡೋ ಕಾರ್ಮಿಕರು, ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ಸ್ಥಳೀಯ ಅಧಿಕಾರಿಗಳ ಮೂಲಕ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ವಂತೆ. ಅಲ್ಲಿರೋ ಅಧಿಕಾರಿಗಳು ಕರ್ನಾಟಕ ಸರ್ಕಾರದಿಂದ ತಮಗೆ ಅನುಮತಿ ಪತ್ರ ಬರಬೇಕು. ಆಗಷ್ಟೇ ಅವರನ್ನು ಕರ್ನಾಟಕಕ್ಕೆ ಕಳಿಸಿಕೊಡೋದಕ್ಕೆ ಸಾಧ್ಯ ಎಂದು ಹೇಳ್ತಿದ್ದಾರೆ.
ಹೀಗಾಗಿಯೇ ಡಿಸಿಎಂ, ಸಾರಿಗೆ ಸಚಿವರೂ ಆಗಿರೋ ಲಕ್ಷ್ಮಣ ಸವದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಸಹಾಯ ಮಾಡಲಿ ಅಂತಾ ಅಲ್ಲಿನ ಜನರು ವಿಡಿಯೋ ಮಾಡಿ ಈಟಿವಿ ಭಾರತಕ್ಕೆ ಕಳುಹಿಸಿದ್ದಾರೆ. ತೆಲಸಂಗ ಗ್ರಾಮದ ಜನರೇ ಇದರಲ್ಲಿ ಹೆಚ್ಚು ಇರೋದ್ರಿಂದ ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಅವರೂ ಕೂಡ ಗಮನಿಸಬೇಕಿದೆ. ಅಲ್ಲದೇ ತೆಲಸಂಗ ಗ್ರಾಮ ಶಾಸಕ ಮಹೇಶ ಕುಮಟಳ್ಳಿ ಅವರ ಸ್ವಗ್ರಾಮ ಆಗಿದೆ.
ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗ ಜಿಲ್ಲೆಯಲ್ಲಿ ಅಥಣಿ ತಾಲೂಕಿನ ತೆಲಸಂಗ, ಪಡತಾರವಾಡಿ ಗ್ರಾಮದ ಜನರು ಅಷ್ಟೇ ಅಲ್ಲದೆ ವಿಜಯಪುರ ಜಿಲ್ಲೆಯ ಜನರೂ ಕೂಡ ಇವರೊಂದಿಗೆ ಇದ್ದಾರೆ. ಸ್ವಗ್ರಾಮ ತಲುಪಬೇಕೆಂದು ಕನ್ನಡಿಗರು ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗದಲ್ಲಿ ಪರದಾಡ್ತಿದ್ದು, ಕೂಡಲೇ ಕರ್ನಾಟಕ ಸರ್ಕಾರವು ಮಹಾರಾಷ್ಟ್ರದಲ್ಲಿರೋ ಕನ್ನಡಿಗರ ರಕ್ಷಣೆಗೆ ಧಾವಿಸಬೇಕಿದೆ.