ಕರ್ನಾಟಕ

karnataka

ETV Bharat / state

ಮಕ್ಕಳಿಗೆ ಸಮಾಜದ ಮೌಲ್ಯ ಹೆಚ್ಚಿಸುವ ಶಿಕ್ಷಣ ಕಲಿಸಬೇಕು: ಲೆಫ್ಟಿನೆಂಟ್​ ಅಭಯ್ ಅವಸ್ಥಿ

ಬೆಳಗಾವಿಯ ಪ್ರತಿಷ್ಠಿತ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಬರುವ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು, ಎನ್ಎಸ್ಎಸ್ ಲೆಫ್ಟಿನೆಂಟ್ ಅಭಯ್ ಅವಸ್ಥಿ ನೆರವೇರಿಸಿದರು.

By

Published : Jul 28, 2019, 6:15 AM IST

ಬೆಳಗಾವಿ ಜೆಎಸ್ಎಸ್ ಮಹಾವಿದ್ಯಾಲಯ

ಬೆಳಗಾವಿ: ಇಂದಿನ ಮಕ್ಕಳಿಗೆಸಮಾಜದಲ್ಲಿರುವ ಮೌಲ್ಯ ಹೆಚ್ಚಿಸುವ ನೈತಿಕ ಶಿಕ್ಷಣ ಕಲಿಸಬೇಕಾಗಿದೆ ಎಂದುಎನ್ಎಸ್ಎಸ್ ಲೆಫ್ಟಿನೆಂಟ್ ಅಭಯ್ ಅವಸ್ಥಿ ಹೇಳಿದರು.

ಬೆಳಗಾವಿಯ ಪ್ರತಿಷ್ಠಿತ ಜೆಎಸ್ಎಸ್ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಇವತ್ತಿನ ಯುವ ಸಮೂಹ ಕೇವಲ ಪುಸ್ತಕದ ಹುಳುಗಳಾಗಿದ್ದು, ಈ ಸನ್ನಿವೇಶ ಬದಲಾಗಬೇಕು. ಮಕ್ಕಳು ಶಾಲಾ ಪುಸ್ತಕದ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.

ಮಕ್ಕಳಿಗೆ ಕೇವಲ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಮಾತ್ರ ತಿಳಿಸದೆ, ಅವರ ಆರೋಗ್ಯ ಹಾಗೂ ಸಮಾಜದಲ್ಲಿರುವ ಮೌಲ್ಯ ಹೆಚ್ಚಿಸುವ ನೈತಿಕ ಶಿಕ್ಷಣ ಕಲಿಸಬೇಕಾಗಿದೆ. ಸದೃಢ ಸಮಾಜ ನಿರ್ಮಿಸಲು ಇಂದಿನ ಯುವಕರನ್ನು ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಕಿವಿಮಾತು ಹೇಳಿದರು.

ABOUT THE AUTHOR

...view details