ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಅಶ್ವತ್ಥ ನಾರಾಯಣ ಮಂದಿರವನ್ನೂ ಕಟ್ಟಲಿ: ಡಿಕೆಶಿ ವ್ಯಂಗ್ಯ - ayodhya

ಅಧಿವೇಶನದಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣದ ಪ್ರಸ್ತಾಪ - ವ್ಯಂಗವಾಡಿದ ಡಿಕೆ ಶಿವಕುಮಾರ್​ - ಅಮಿತ್​ ಶಾ ರಾಜ್ಯ ಪ್ರವಾಸಕ್ಕೆ ಬಂದು ಹೋಗಲಿ ಬಿಡಿ ಎಂದು ತಿರುಗೇಟು.

aswattha-narayan-mandir-should-also-built-in-ramanagara-dk-shivakumar
ರಾಮನಗರದಲ್ಲಿ ಅಶ್ವತ್ಥ ನಾರಾಯಣ ಮಂದಿರವನ್ನೂ ಕಟ್ಟಲಿ: ಡಿಕೆಶಿ ವ್ಯಂಗ್ಯ

By

Published : Dec 28, 2022, 4:27 PM IST

ಬೆಳಗಾವಿ : ರಾಮನಗರದಲ್ಲಿ ರಾಮ‌ ಮಂದಿರವನ್ನಾದರೂ ಕಟ್ಟಲಿ,‌ ಸೀತಾ ಮಂದಿರವನ್ನಾದರೂ ಕಟ್ಟಲಿ, ಬೇಕಿದ್ದರೆ ಅಶ್ವತ್ಥ ನಾರಾಯಣ ಮಂದಿರವನ್ನಾದರೂ ಕಟ್ಟಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್​ ಕೊಟ್ಟಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಬಗ್ಗೆ ಪ್ರತಿಕ್ರಿಯಿಸಿದರು. ಮೂರು ವರ್ಷದ ಹಿಂದೆ ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಏನೋ ಕ್ಲೀನ್ ಮಾಡ್ತೀವಿ ಎಂದು ಹೇಳಿದ್ದರು. ಈಗ ಎಲ್ಲವನ್ನೂ ಕ್ಲೀನ್ ಮಾಡಿದ್ದಾರೆ.‌ ಇಡೀ ರಾಮನಗರ ಕ್ಲೀನ್ ಮಾಡಿರೋದು ನೋಡಿದ್ದೀನಿ ಎಂದು ಡಿಕೆಶಿ ಸಚಿವರಿಗೆ ಭರ್ಜರಿಯಾಗಿಯೇ ತಿರುಗೇಟು ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯ ಪ್ರವಾಸ ಕೈಕೊಳ್ಳಲಿದ್ದು, ಹಳೇ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಟಾರ್ಗೆಟ್ ಮಾಡಿದ್ದರ ವಿಚಾರವಾಗಿ ಮಾತನಾಡುತ್ತಾ, ಮೊದಲು ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಲಿ, ಆ ಮೇಲೆ ನೋಡೋಣ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಹಳೇ ಮೈಸೂರು ಭಾಗಕ್ಕೆ ಈ ಬಾರಿ ನಮ್ಮ ಒತ್ತು - ಅಮಿತ್​ ಶಾ ಯಾವ ಪಿಚ್​ನಲ್ಲಾದ್ರೂ ಆಡುತ್ತಾರೆ: ಸಿಟಿ ರವಿ

ABOUT THE AUTHOR

...view details