ಬೆಳಗಾವಿ : ಕುಂದಾನಗರಿಯಲ್ಲಿ ನಡೆಯುವ ಐತಿಹಾಸಿಕ ಗಣೇಶ ನಿಮಜ್ಜನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತು ನಗರದ ಚೆನ್ನಮ್ಮ ವೃತ್ತದ ಪೊಲೀಸರು ಪಥ ಸಂಚಲನ ನಡೆಸಿದರು.
ಬೆಳಗಾವಿಯಲ್ಲಿ ಅದ್ದೂರಿ ಗಣೇಶ ನಿಮಜ್ಜನೋತ್ಸವ: ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ - ಗಣೇಶ ನಿಮಜ್ಜನ
ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಭಾರಿ ಸುಮಾರು 377 ಸಾರ್ವಜನಿಕ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಗುರುವಾರ ನಿಮಜ್ಜನ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ಅವಘಡ ಸಂಭವಿಸದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಏರ್ಪಡಿಸಿದೆ.
DCP Yashoda
ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಭಾರಿ ಸುಮಾರು 377 ಸಾರ್ವಜನಿಕ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದವು. ಗುರುವಾರ ಈ ಮೂರ್ತಿಗಳ ನಿಮಜ್ಜನ ಕ್ರಿಯೆ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ಅವಘಡ ಸಂಭವಿಸದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಏರ್ಪಡಿಸಿದೆ.
ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಯಶೋದಾ ಮಾತನಾಡಿ, ಗಣೇಶೋತ್ಸವ ನಿಮಜ್ಜನದ ಸಮಯದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ರು.