ಕರ್ನಾಟಕ

karnataka

ETV Bharat / state

ಬೈಲಹೊಂಗಲ: ನ್ಯಾಯಾಲಯದ ಆವರಣದಲ್ಲಿ ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ - belgavi latest news

ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನ್ಯಾಯಾಲಯದಲ್ಲಿ ಸೋಮವಾರ ಅರ್ಜಿದಾರ, ಸಾಮಾಜಿಕ ಹೋರಾಟಗಾರರಾದ ರಫೀಕ್​ ಬಡೇಘರ್​ ಆರೋಪಿ ರಫೀಕ್​ ಸವದತ್ತಿ ಮೇಲೆ ಆರೋಪಿಸಿದ್ದಾರೆ.

ಅರ್ಜಿದಾರರಾದ ರಫಿಕ್​ ಬಡೇಘರ

By

Published : Oct 1, 2019, 12:04 PM IST

ಬೈಲಹೊಂಗಲ:ನ್ಯಾಯಾಲಯದ ಆವರಣದಲ್ಲಿಯೇ ಅರ್ಜಿದಾರರ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ಬೈಲಹೊಂಗಲ ಪಟ್ಟಣ ನ್ಯಾಯಾಲಯ ಆವರಣದಲ್ಲಿ ಸೋಮವಾರ ನಡೆದಿದೆ.

ಅರ್ಜಿದಾರರಾದ ರಫಿಕ್​ ಬಡೇಘರ

2015ರಲ್ಲಿ ಈದ್​ ಮಿಲಾದ್​ ಹಬ್ಬದ ವರದಿಗೆ ತೆರಳಿದ ಮಾಧ್ಯಮದವರ ಕ್ಯಾಮೆರಾ ಕಸಿದುಕೊಂಡು, ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿವೆ.

ಸೋಮವಾರ ಆರೋಪಿಗಳು ನ್ಯಾಯಾಲಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರ ರಫೀಕ್​ ಬಡೇಘರ ಎಂಬುವವರ ಮೇಲೆ ರಫೀಕ್​ ಸವದತ್ತಿ ಎಂಬ ಆರೋಪಿ ಹಲ್ಲೆ ಮಾಡಿದ್ದಾರೆ. ಸೂಕ್ತ ರಕ್ಷಣೆ ನೀಡುವಂತೆ ಅರ್ಜಿದಾರ ರಫೀಕ್​ ಬಡೇಘರ ವಿಡಿಯೋ ಒಂದರಲ್ಲಿ ಮನವಿ ಮಾಡಿದ್ದಾರೆ.

ಸಾಮಾಜಿಕ ಹೋರಾಟಗಾರರಾದ ರಫೀಕ ಬಡೇಘರ, ಆಶೀಫ್ ಗೋವೆ ಇವರು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಹಲ್ಲೆ ಪ್ರಕರಣದ ಆರೋಪಿ ರಫೀಕ ಸವದತ್ತಿ, ಅರ್ಜಿಯನ್ನು ವಾಪಸ್​ ಪಡೆಯುವಂತೆ ಒತ್ತಾಯಿಸಿ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾರೆ ಎಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ರಫೀಕ್​ ಪೊಲೀಸರು ಐಪಿಸಿ 323, 341, 504, 506 ಕಲಂ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.

ABOUT THE AUTHOR

...view details