ಗೋಕಾಕ್:ಕಾನೂನಿನ ವಿಧಿ ವಿಧಾನಗಳಿಗೆ ಅನ್ವಯವಾಗಿಯೇ ಸುಪ್ರೀಂ ಕೋರ್ಟ್ನಿಂದ ತೀರ್ಪು ಪ್ರಕಟವಾಗಿದೆ. ಅದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ. ಏಕೆಂದರೆ ಒಬ್ಬ ಶಾಸಕನ ಅನರ್ಹತೆಯ ತಿರ್ಮಾನ ಮಾಡುವ ಪರಮಾಧಿಕಾರವಿರುವುದು ಸ್ಪೀಕರ್ ಅವರಿಗೆ. ಅದಕ್ಕೆ ಪೂರಕವಾಗಿಯೇ ಅವರು ಆದೇಶ ನೀಡಿದ್ದಾರೆ. ಅಲ್ಲದೇ ಈ ತೀರ್ಪು ನಿರೀಕ್ಷಿತವೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಅನರ್ಹರ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಿರೀಕ್ಷಿತ: ಅಶೋಕ ಪೂಜಾರಿ
ಕಾನೂನಿನ ವಿಧಿ ವಿಧಾನಗಳಿಗೆ ಅನ್ವಯವಾಗಿಯೇ ಸುಪ್ರೀಂ ಕೋರ್ಟ್ನಿಂದ ತೀರ್ಪು ಪ್ರಕಟವಾಗಿದೆ. ಅದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಗೊಕಾಕ್ ಚುನಾವಣೆಯ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಗೋಕಾಕ್ನಿಂದ ಸ್ಪರ್ಧೆ ಮಾಡಿದ್ದೇನೆ. ಸಹಜವಾಗಿ ಜನರ ನಿರೀಕ್ಷೆ ನನ್ನ ಮೇಲಿದೆ. ಇಲ್ಲಿನ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ ವ್ಯವಸ್ಥೆ ದೂರ ಮಾಡಲು ಹೋರಾಟ ನಡೆಸುತ್ತಿದ್ದು, ಹೋರಾಟ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ನನಗೆ ಬೆಂಬಲ ನೀಡಿದ್ದಾರೆ ಎಂದರು.
ಈಗಾಗಲೇ ಪಕ್ಷದ ವರಿಷ್ಠರು ಮತ್ತು ನನ್ನ ಹಿತೈಷಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಆದರೆ ಸಾರ್ವತ್ರಿಕ ಸಭೆಯ ನಂತರವಷ್ಟೇ ನನ್ನ ನಿಲುವನ್ನು ಪ್ರಕಟಿಸಲಾಗುವುದು. ನಾನು ಸದ್ಯ ಬಿಜೆಪಿ ಪಕ್ಷದಲ್ಲಿ ಇದ್ದೇನೆ. ಇದೇ ಶನಿವಾರದಂದು ಕರೆದಿರುವ ಬೆಂಬಲಿಗರ ಸಭೆಯ ನಂತರ ಚುನಾವಣೆಗೆ ಸ್ವರ್ಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.