ಬೆಳಗಾವಿ: ಸಿಎಂ ಜನರಲ್ ಫಿಲಾಸಫಿಕಲ್ ಮ್ಯಾನ್. ರಾಜಕಾರಣದಲ್ಲಿ ಸಿಎಂ ಯಾವಾಗ್ಲೂ ಡೈನಾಮಿಕ್ ಎಂದು ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಂಪುಟ ಪುನರ್ ರಚನೆ ಸಿಎಂ ನಿರೀಕ್ಷೆಗೆ ಬಿಟ್ಟದ್ದು. ನಾನು ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಿಎಂ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಚನ್ನಾಗಿ ಕೆಲಸ ಮಾಡುತ್ತಾರೆ. ಯಾವುದೇ ರೇಸ್ನಲ್ಲಿ ನಾನು ಇಲ್ಲ ಎಂದರು.
ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಕುರಿತು ಮಾತನಾಡಿ, ಪ್ರತಿಯೊಬ್ಬ ಹಿಂದೂ ಸಮಾಜದವರಿಗೆ ನೋವಿನ ವಿಚಾರ ಇದು. ಅವರ ಮನದ ಮಾತನ್ನ ಸರ್ಕಾರ ಕಾನೂನಿನ ಮೂಲಕ ಹೊರಹಾಕಿದೆ. ಈ ಕಾನೂನನ್ನ ವಿರೋಧ ಮಾಡುತ್ತಿರುವುದು ಕ್ರೈಸ್ತ ಸಮಾಜದವರು. ಎಷ್ಟೋ ಕ್ರಿಮಿನಲ್ ಕಾಯ್ದೆ ಬದಲಾವಣೆ ಆಗ್ತಾ ಇರುತ್ತೆ. ಕ್ರಿಮಿನಲ್ ಇದ್ದವರಿಗೆ ಅದರ ಚಿಂತೆ ಹೆಚ್ಚಾಗಿರುತ್ತೆ. ಮತಾಂತರ ಮಾಡುವವರಿಗೆ ದಂಡನೆಯಾಗುತ್ತದೆ. ಯಾರೇ ಮತಾಂತರ ಆದ್ರೂ ಕೂಡ 10 ವರ್ಷ ಸಂಪೂರ್ಣ ಸಜೆ ಆಗ್ಬೇಕು.
ಸಂಪೂರ್ಣ ಮತಾಂತರ ಆಗುವವರ ಹಿಂದೆ ಸಂಘಟನೆ, ಸಂಸ್ಥೆಗಳಿವೆ. ಮತಾಂತರ ಜೊತೆಗೆ ಸಂಸ್ಥೆ, ಚರ್ಚ್ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕುಮ್ಮಕ್ಕು ಕೊಡುವ ಸಂಸ್ಥೆಯ ಚರಾಸ್ತಿ, ಸ್ಥಿರಾಸ್ತಿಯನ್ನ ಸರ್ಕಾರ ಮುಟ್ಟುಗೋಲು ಹಾಕ್ಬೇಕು ಎಂದರು. ಯತ್ನಾಳ್ ಟೀಕೆ ಕುರಿತು ಮಾತನಾಡಿ, ನಾನು ಬೇರೆಯವರ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಓದಿ:ಮತಾಂತರ ನಿಷೇಧ ಮಸೂದೆ RSS ಅಜೆಂಡಾ ಎಂದು ಒಪ್ಪಿಕೊಳ್ಳುವೆ: ಸಚಿವ ಅಶ್ವತ್ಥ ನಾರಾಯಣ