ಬೆಳಗಾವಿ:ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಜೈಲಿನ ಗೋಡೆ ಹಾರಿ ನಾಲ್ಕು ತಿಂಗಳ ಹಿಂದೆ ಪರಾರಿಯಾಗಿದ್ದ ನಟೋರಿಯಸ್ ಕೈದಿಯನ್ನು ಬಂಧಿಸುವಲ್ಲಿ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಿಂಡಲಗಾ ಜೈಲಿನಿಂದ ಪರಾರಿಯಾಗಿದ್ದ ನಟೋರಿಯಸ್ ಕೈದಿಯ ಬಂಧನ - ನಟೋರಿಯಸ್ ಕೈದಿ
ಬೆಳಗಾವಿ ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹದ ಜೈಲಿನ ಗೋಡೆ ಹಾರಿ ನಾಲ್ಕು ತಿಂಗಳ ಹಿಂದೆ ಪರಾರಿಯಾಗಿದ್ದ ನಟೋರಿಯಸ್ ಕೈದಿಯನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಮುರಗನ್ (51) ಬಂಧಿತ ಕೈದಿ. ಎಪ್ರಿಲ್ 22 ರಂದು ಸಂಜೆ 7.30ಕ್ಕೆ ಮುರಗನ್ ಜೈಲಿನಿಂದ ಪರಾರಿಯಾಗಿದ್ದ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮಿಳುನಾಡಿನ ಸೇಲಂ ಜಿಲ್ಲೆಯ ಗೊರವರೆಡ್ಡಿವೂರ್ ಗ್ರಾಮದಲ್ಲಿ ತಮಿಳನಾಡಿನ ಕೊಳತ್ತೂರ ಠಾಣೆ ಪೊಲೀಸರ ಸಹಕಾರರೊಂದಿಗೆ ಮಹಾನಗರ ಪೊಲೀಸರು ಮುರಗನ್‌ನನ್ನು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮುರಗನ್ ಏಕಕಾಲಕ್ಕೆ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣದಡಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ.ಗ್ರಾಮೀಣ ಠಾಣೆಯ ಪಿಐ ಸಂಗಮೇಶ ಶಿವಯೋಗಿ ಹಾಗೂ ಜೈಲರ್ ಟಿ.ಕೆ. ಲೊಕೇಶ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.