ಕರ್ನಾಟಕ

karnataka

ETV Bharat / state

ಮನೆ ಮುಂದೆ ನಿಲ್ಲಿಸಿದ್ದ ವಾಹನ ಕದ್ದಿದ್ದ ಖದೀಮರು ಅಂದರ್​ - Arrest ,thieves ,,thefted ,vehicles ,

ತಪಾಸಣೆ ನಡೆಸಿದ ಪೊಲೀಸರು, ಮಾಂಗೂರ ಫಾಟಾ ಹತ್ತಿರ ಇಬ್ಬರನ್ನೂ ಬಂಧಿಸಿ ಅವರಿಂದ 3 ಲಕ್ಷ ಮೌಲ್ಯದ ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ವಾಹನ ಕದ್ದಿದ್ದ ಖದೀಮರು ಅಂದರ್​

By

Published : Jun 17, 2019, 12:51 PM IST

ಚಿಕ್ಕೋಡಿ: ಮನೆ ಮುಂದೆ ನಿಲ್ಲಿಸಿದ್ದ ವಾಹನ ಕಳವು ಮಾಡಿಕೊಂಡು ಹೋಗಿದ್ದ ಇಬ್ಬರು ಖದೀಮರನ್ನು ಹಿಡಿಯುವಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕೇಶವಪುರದ ಕೊಂಚಿಕೊರವರ ಓಣಿಯ ಗಂಗಪ್ಪಾ ಯಲ್ಲಪ್ಪಾ ಮುಳಗುಂದ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದ ಮದಿನಿ ನಗರ ಪ್ಲಾಟ್‌ನ ನೂರ್‌ ಭಾಷಾ ಹುಸೇನಸಾಬ್​ ಯಾದವಾಡ ಬಂಧಿತರು.

ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದ ರಾಜಾರಾಮ ಶ್ರೀಕೃಷ್ಣಾ ನಲವಡೆ ಮನೆ ಮುಂದೆ ನಿಲ್ಲಿಸಿದ್ದ ಮಹಿಂದ್ರ ಬುಲೆರೊ ಮಾಕ್ಸಿ ಗೂಡ್ಸ್ ಜೀಪ್ ಕಳವಾಗಿದ್ದರ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಪಾಸಣೆ ನಡೆಸಿದ ಪೊಲೀಸರು, ಮಾಂಗೂರ ಫಾಟಾ ಹತ್ತಿರ ಇಬ್ಬರನ್ನೂ ಬಂಧಿಸಿ ಅವರಿಂದ 3 ಲಕ್ಷ ಮೌಲ್ಯದ ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಚಿಕ್ಕೋಡಿ ಎಎಸ್‌ಪಿ ಮಿಥುನ್​ ಕುಮಾರ್​ ಜಿ.ಕೆ. ನೇತೃತ್ವದಲ್ಲಿ ಸಿಪಿಐ ಕರುಣೇಶಗೌಡ ಜೆ., ಪಿಎಸ್‌ಐ ಬಿ.ಎಸ್. ತಳವಾರ, ಎಎಸ್ಐ ಎಸ್.ಐ. ಕಮ್ಮಾರ, ಎ.ಬಿ. ಗಿಡ್ಡಾಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

For All Latest Updates

ABOUT THE AUTHOR

...view details