ಬೆಳಗಾವಿ: ನಗರದ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗೆ ಮಾನವ ಹಕ್ಕುಗಳ ಬೆಳಗಾವಿ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೋವಿಡ್ ವಿರುದ್ದ ಹೋರಾಡುತ್ತಿರುವ ಶಹಾಪುರ ಪೊಲೀಸರಿಗೆ ಸನ್ಮಾನ - ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ
ಕೋವಿಡ್ (19) ಹೋಗಲಾಡಿಸಲು ಶ್ರಮಿಸುತ್ತಿರುವ ಬೆಳಗಾವಿಯ ಶಹಪೂರ ಪೊಲೀಸ್ ಠಾಣೆಯ ಎಲ್ಲ ಪೊಲೀಸರಿಗೆ ಸನ್ಮಾನಿಸಲಾಯಿತು.
ಕೋವಿಡ್ ವಿರುದ್ದ ಹೋರಾಡುತ್ತಿರುವ ಶಹಾಪುರ ಪೊಲೀಸರಿಗೆ ಸನ್ಮಾನ
ಕೋವಿಡ್ (19) ಹೋಗಲಾಡಿಸಲು ಶ್ರಮಿಸುತ್ತಿರುವ ಬೆಳಗಾವಿಯ ಶಹಪೂರ ಪೊಲೀಸ್ ಠಾಣೆಯ ಎಲ್ಲ ಪೊಲೀಸರಿಗೆ ಸನ್ಮಾನಿಸಿದ್ದಲ್ಲದೇ ಹಲವು ವರ್ಷಗಳಿಂದ ಅದೇ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿ ಬೇರೆ ಠಾಣೆಗೆ ವರ್ಗಾವಣೆಗೊಂಡ ಮಾರುತಿ ಕಾಂಬಳೆ ಅವರನ್ನೂ ಸನ್ಮಾನಿಸಿ ಬೀಳ್ಕೊಡಲಾಯಿತು.
ಇನ್ನು ಕೊರೊನಾ ಯುದ್ಧದಲ್ಲಿ ಜನರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಕಾರ್ಯ ಮಾಡಿದ ಠಾಣೆಯ ಎಲ್ಲ ಸಿಬ್ಬಂದಿಗಳಿಗೂ ಹೂಹಾರ ಹಾಕಿ ಗೌರವಿಸಿದರು. ಪಿಎಸ್ಐ ಮಾರುತಿ ಕಾಂಬಳೆ, ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಮಹಾಂತೇಶ್ ಹುಲಿಕಟ್ಟಿ ಸೇರಿದಂತೆ ಶಹಾಪೂರ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರು.