ಚಿಕ್ಕೋಡಿ : ಕೃಷ್ಣಾ ನದಿಯ ನೆರೆಯ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರವಾಹಕ್ಕೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾನೆ.
ಪ್ರವಾಹಕ್ಕೆ ಮತ್ತೊಂದು ಬಲಿ.. ಹೇ,'ಕೃಷ್ಣ' ನೀನೇ ನಮ್ಮನ್ನ ಕಾಪಾಡಬೇಕು.. - Krishna river Flood
ಗೂಂಡವಾಡದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿ ಸಾವನಪ್ಪಿದ್ದಾರೆ.

ಕಾಪಾಡು ಕೃಷ್ಣಾ..
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಗೂಂಡವಾಡ ಗ್ರಾಮದಲ್ಲಿ ಗುಂಡು ಅಪ್ಪಾಸಾಬ ಅಂಗಲಿ (33) ಎಂಬ ವ್ಯಕ್ತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಗೂಂಡವಾಡದಿಂದ ಕುಡಚಿ ಪಟ್ಟಣಕ್ಕೆ ಹೋಗುವಾಗ ನದಿಯಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.