ಕರ್ನಾಟಕ

karnataka

ETV Bharat / state

ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ... ಉಸಿರಾಟ ಸಮಸ್ಯೆಯಿಂದ ವೃದ್ಧನ ಪರದಾಟ! - ಬಿಮ್ಸ್​​ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ,

ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ತೀವ್ರ ಉಸಿರಾಟದ ತೊಂದರೆಯಿದ್ದ ಮತ್ತು ನಿಲ್ಲಲು ಆಗದ ಸ್ಥಿತಿಯಲ್ಲಿದ್ದ ವೃದ್ಧ ಪರದಾಡಿರುವ ಘಟನೆ ನಡೆದಿದೆ.

inhumane incident, inhumane incident at Bims Hospital, Belagavi nhumane incident at Bims Hospital, ಅಮಾನವೀಯ ಘಟನೆ, ಬಿಮ್ಸ್​​ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ, ಬಿಮ್ಸ್​​ ಆಸ್ಪತ್ರೆ ಸುದ್ದಿ,
ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ

By

Published : Jul 26, 2020, 5:34 AM IST

Updated : Jul 26, 2020, 7:43 AM IST

ಬೆಳಗಾವಿ:ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬ ಚಿಕಿತ್ಸೆಗಾಗಿ ಪರದಾಡಿರುವುದು ಬೆಳಕಿಗೆ ಬಂದಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಇಲ್ಲಿನ ಗಾಂಧಿನಗರದ ವೃದ್ಧನಿಗೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆ ಆಗಿದೆ. ಈ ವೇಳೆ ರೋಗಿಯ ಪುತ್ರಿ ಸ್ಕೂಟಿ ಮೇಲೆಯೇ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ, ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಫಾರ್ಮ್ ತುಂಬಿಕೊಂಡು ಬನ್ನಿ ಎಂದಿದ್ದಾರೆ.

ತೀವ್ರ ಉಸಿರಾಟ ಸಮಸ್ಯೆ ಇರುವ ವೃದ್ಧನಿಗೆ ಕೊರೊನಾ ಶಂಕೆ ಹಿನ್ನೆಲೆ ಅವರನ್ನು ಸ್ಕೂಟಿ ಮೇಲೆ ಪುತ್ರಿ ಕರೆದುಕೊಂಡು ಬಂದಿದ್ದಾರೆ. ಆದ್ರೆ, ವೃದ್ಧನನ್ನ ಆಸ್ಪತ್ರೆ ಒಳಗೆ ಸೇರಿಸಿಕೊಳ್ಳದಿರುವ ಹಿನ್ನೆಲೆ ಸ್ಕೂಟಿ ಮೇಲೆಯೇ ಕೂರಿಸಿದ್ದಾರೆ. ಬಳಿಕ ವೃದ್ಧನ ಮಗಳು ತಂದೆಯನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಅಂಗಲಾಚಿದರೂ ಪ್ರಯೋಜವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ನಿಲ್ಲಲು ಆಗದ ವೃದ್ಧ ರಸ್ತೆ ಮೇಲೆಯೇ ಇದ್ದ ಮಗಳ ಸ್ಕೂಟಿ ಮೇಲೆ ಕುಳಿತುಕೊಂಡರು. ಆದ್ರೆ, ಬಿಮ್ಸ್‌ ಆಸ್ಪತ್ರೆಯ ಸಿಬ್ಬಂದಿ ಇತ್ತ ತಿರುಗಿಯೂ ನೋಡಲಿಲ್ಲವಂತೆ. ಇದೇ ರೀತಿ ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಬಂದು ರೋಗಿಗಳು ಪರದಾಡಿದ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.

Last Updated : Jul 26, 2020, 7:43 AM IST

ABOUT THE AUTHOR

...view details