ಚಿಕ್ಕೋಡಿ :ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್ಅನ್ನು ಚಿಕ್ಕೋಡಿ ಕ್ಷೇತ್ರದ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವೀಕರಿಸಿ ಅಭಿವೃದ್ಧಿಗೆ ಮುನ್ನುಡಿ ಇಟ್ಟಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಸವಾಲನ್ನು ಸ್ವೀಕರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ - undefined
ಚಿಂತಕ, ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಸಂಸದರಿಗೆ ಹಾಕಿರುವ ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್ನ್ನು ಚಿಕ್ಕೋಡಿ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವೀಕರಿಸಿದ್ದಾರೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ ನೂತನ ಸಂಸದ.
ಪ್ರತಿ ಸಂಸದರು ತಮ್ಮ ವ್ಯಾಪ್ತಿಯಲ್ಲಿನ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಇದಕ್ಕಾಗಿ ಕರ್ನಾಟಕ ಸಂಸದರಿಗೆ ಯುವ ಬ್ರಿಗೇಡ್ನ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸಂಸದರಿಗೆ ಸವಾಲು ಹಾಕಿದ್ದಾರೆ.
ಗ್ರಾಮ ವಾಸ್ತವ್ಯಕ್ಕೆ ಪ್ರತಿಯಾಗಿ ಗ್ರಾಮ ಸ್ವರ್ಗ ಆರಂಭಿಸಬೇಕೆಂದು ಸೂಲಿಬೆಲೆ ಟ್ವೀಟ್ ಮಾಡುವುದರ ಮೂಲಕ ಸಂಸದರಿಗೆ ಕರೆ ನೀಡಿದ್ದಾರೆ. ಪ್ರತಿ ಸಂಸದರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕಿದೆ. ಸೂಲಿಬೆಲೆ ಅವರ ಈ ಚಾಲೆಂಜ್ ಸ್ವೀಕರಿಸುವುದಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತಿಟ್ವೀಟ್ ಮಾಡಿದ್ದಾರೆ.