ಚಿಕ್ಕೋಡಿ : ನನ್ನನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸಿರುವ ತಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು. ಹೀಗಂತಾ 2019ನೇ ಸಾಲಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಅಣ್ಣಾಸಾಹೇಬ ಶಂಕರ ಜೊಲ್ಲೆ ಕಾರ್ಯಕರ್ತರಿಗೆ ಪತ್ರ ಕಳುಹಿಸುವ ಮೂಲಕ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ.
ಕಾರ್ಯಕರ್ತರಿಗೆ ವಿಶಿಷ್ಠವಾಗಿ ಧನ್ಯವಾದ ಸಮರ್ಪಿಸಿದ ಚಿಕ್ಕೋಡಿ ಸಂಸದ - undefined
2019ನೇ ಸಾಲಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾಗಿರುವ ಅಣ್ಣಾಸಾಹೇಬ ಶಂಕರ ಜೊಲ್ಲೆ ಕಾರ್ಯಕರ್ತರಿಗೆ ಪತ್ರ ಬರೆಯುವ ಮೂಲಕ ಧನ್ಯವಾದ ಸಮರ್ಪಿಸಿ ಗಮನ ಸೆಳೆದಿದ್ದಾರೆ.
ವಿನೂತನವಾಗಿ ಶುಭಕೋರಿರುವ ಪತ್ರದಲ್ಲಿ ಏನಿದೆ?: ’ನನಗೆ ನೀಡಿರುವ ಗೌರವ ಪ್ರೀತಿ ಅಭಿಮಾನಿಗಳಿಂದ ನಾನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನ ಸೇವಕನಾಗಿದ್ದು, ತಾವು ವೃತ್ತಪತ್ರಿಕೆ / ಡಿಜಿಟಲ್ ಬ್ಯಾನರ್, ಮೂಲಕ ಆಶೀರ್ವಾದ ಹಾಗೂ ಶುಭಾಶಯ ಸಲ್ಲಿಸಿರುವುದಕ್ಕೆ ನಾನು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಚಿರ ಋಣಿಯಾಗಿದ್ದೇನೆ. ತಾವು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದ ಬಲದಿಂದ ನನಗೆ ಸಹಕಾರ, ಶಿಕ್ಷಣ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ’’.
ಮುಂಬರುವ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳ ಅನುಷ್ಠಾನಗೊಳಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಅಭಿಮಾನ ಹಾಗೂ ಹಾರೈಕೆ ಸದಾ ನನ್ನ ಮೇಲೆ ಇರಲೆಂದು ಅಪೇಕ್ಷಿಸುತ್ತ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸಹಕಾರ- ಸಲಹೆ ಸೂಚನೆಗಳು ಸದಾ ಬಯಸುತ್ತೇನೆ. ಧನ್ಯವಾದಗಳೊಂದಿಗೆ ಎಂದು ಚಿಕ್ಕೋಡಿ ಲೋಕಸಭಾ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ನೂತನ ಸಂಸದರು ಧನ್ಯವಾದ ಸಮರ್ಪಿಸಿದ್ದಾರೆ.