ಚಿಕ್ಕೋಡಿ: ಕೊರೊನಾ ರೋಗಿಗಳ ಆರೈಕೆಗೆ ನಿಪ್ಪಾಣಿಯ ನಾಲ್ವರು ಯುವಕರು ಒಂದು ಹೊಸ ಐಡಿಯಾ ಮಾಡಿ, ರೋಬೋಟ್ ತಯಾರಿಸಿದ್ದಾರೆ.
ಕೊರೊನಾ ರೋಗಿಗಳ ಆರೈಕೆಗೆ ಬಂತು ಅನ್ನಪೂರ್ಣ ರೋಬೋಟ್!
ಕೊರೊನಾ ರೋಗಿಗಳ ಆರೈಕೆಗೆ ಅನುಕೂಲವಾಗುವಂತೆ ನಿಪ್ಪಾಣಿ ಮೂಲದ ಇಂಜಿನಿಯರ್ಸ್ ರೋಬೋಟ್ವೊಂದನ್ನು ತಯಾರಿಸಿದ್ದಾರೆ. ಅನ್ನಪೂರ್ಣ ಹೆಸರಿನ ಈ ರೋಬೋಟ್ ಅನ್ನು ನಿಪ್ಪಾಣಿಯ ಭಾರತೀಯ ವಿಚಾರ ಮಂಚ್ ಸಂಘಟನೆಯ ಸದಸ್ಯರಾಗಿರುವ ಶೈಲೇಂದ್ರ ಪಾರಿಖ್, ತುಳಸಿದಾಸ ಸಾಳುಂಕೆ, ಬಾನುದಾಸ್ ಸಾಳುಂಕೆ ಮತ್ತು ಭರತ್ ಕುರುಪೆ ಅವರ ತಂಡ ನಿರ್ಮಿಸಿದೆ.
ಅನ್ನಪೂರ್ಣ ರೋಬೋಟ್
ವೃತ್ತಿಯಲ್ಲಿ ಇಂಜಿನಿಯರ್‌ಗಳು ಆಗಿರುವ ನಿಪ್ಪಾಣಿಯ ಭಾರತೀಯ ವಿಚಾರ ಮಂಚ್ ಸಂಘಟನೆಯ ಸದಸ್ಯರಾದ ಶೈಲೇಂದ್ರ ಪಾರಿಖ್, ತುಳಸಿದಾಸ ಸಾಳುಂಕೆ, ಬಾನುದಾಸ್ ಸಾಳುಂಕೆ ಮತ್ತು ಭರತ್ ಕುರುಪೆ ಇವರು ಅನ್ನಪೂರ್ಣ ಎಂಬ ರೋಬೋಟ್ ನಿರ್ಮಿಸಿದ್ದಾರೆ.
ಕೊರೊನಾ ಸೋಂಕಿತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಬಲ ತುಂಬುವ ಉದ್ದೇಶದಿಂದ ಹಾಗೂ ಲಾಕ್‌ಡೌನ್ ಅವಧಿಯ 12 ದಿನಗಳಲ್ಲಿ ಬೆಳಗಾವಿ ನಗರ ಮತ್ತು ನಿಪ್ಪಾಣಿ ಪಟ್ಟಣದಲ್ಲಿ ಸಿಗುವ ಸಾಮಾನ್ಯ ವಸ್ತುಗಳನ್ನೇ ಖರೀದಿಸಿ 40 ಸಾವಿರ ವೆಚ್ಚದಲ್ಲಿ ರೋಬೋಟ್ ನಿರ್ಮಿಸಿದ್ದಾರೆ.
2.5 ಅಡಿ ಅಗಲ ಮತ್ತು 2.5 ಅಡಿ ಎತ್ತರ ಇರುವ ರೋಬೋಟ್ಗೆ ಅಳವಡಿಸಿದ ಕ್ಯಾಮರಾದಿಂದ ಕೊಠಡಿಗಳ ಸ್ವಚ್ಛತೆ, ರೋಗಿಗಳ ವರ್ತನೆ, ಜೀವನ ಶೈಲಿಯನ್ನು ದೂರದಲ್ಲಿ ಕುಳಿತೇ ಗಮನಿಸಬಹುದು. ಇದು ಒಟ್ಟು 10 ರೋಗಿಗಳಿಗೆ ಬೇಕಾದ ಊಟ, ಉಪಾಹಾರ, ಔಷಧಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಮೊಬೈಲ್ ಆ್ಯಪ್ ಮೂಲಕ ಕಾರ್ಯನಿರ್ವಹಿಸಲಿದೆ. ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಿದರೆ ಸತತ 7 ಗಂಟೆಗಳವರೆಗೆ ಕೆಲಸ ಮಾಡುತ್ತದೆ. ರೋಬೋಟ್ನಲ್ಲಿ ವಸ್ತುಗಳ ಸಾಗಣೆ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಸೌಲಭ್ಯವೂ ಇರುವುದರಿಂದ ದೂರದಿಂದ ರೋಗಿಗಳ ವಿಚಾರಣೆ ಮಾಡಬಹುದಾಗಿದೆ. 10 ಜನರು ಏಕಕಾಲಕ್ಕೆ ಮೊಬೈಲ್ ಆ್ಯಪ್ ಮೂಲಕ ಈ ರೋಬೋಟ್ ಕಾರ್ಯನಿರ್ವಹಣೆಯನ್ನು ವೀಕ್ಷಣೆ ಮಾಡಬಹುದಾಗಿದೆ.
TAGGED:
annapoorna-robot latest news