ಕರ್ನಾಟಕ

karnataka

ETV Bharat / state

ಕತ್ತಿ ಬ್ರದರ್ಸ್‌ಗೆ ಸಪೋರ್ಟ್‌ ಮಾಡದ ಸಂಸದ ಅಣ್ಣಾಸಾಹೇಬ ಜೊಲ್ಲೆ.. ಕೋರೆ ಪರ ಬ್ಯಾಟ್‌!! - ರಾಜ್ಯಸಭೆಗೆ ಚುನಾವಣಾ ದಿನಾಂಕ‌ ಫಿಕ್ಸ್

ಹೇಗಾದ್ರೂ ಮಾಡಿ ರಾಜ್ಯಸಭೆಗೆ ತಮ್ಮ ಸಹೋದರನನ್ನ ಕಳುಹಿಸಬೇಕೆಂದು ಪಣ ತೊಟ್ಟಿರುವ ಮಾಜಿ ಸಚಿವ ಉಮೇಶ್‌ ಕತ್ತಿ ಬಂಡಾಯ ಏಳಲು ಹೊರಟಿದ್ದರು. ಆ ಮೂಲಕ ಟಿಕೆಟ್‌ ಗಿಟ್ಟಿಸಲು ವರಿಷ್ಠರ ಮೇಲೆ ಒತ್ತಡ ಹೇರಿದ್ದರು. ಆದರೆ, ಅವರ ತಂತ್ರಗಳೆಲ್ಲವೂ ತಲೆಕೆಳಗಾಗ್ತಿವೆಯೇನೋ ಎನ್ನಿಸ್ತಿದೆ.

Anna Saheb Jolle, MP
ಸಂಸದ ಅಣ್ಣಾಸಾಹೇಬ ಜೊಲ್ಲೆ

By

Published : Jun 3, 2020, 4:21 PM IST

ಚಿಕ್ಕೋಡಿ :ರಾಜ್ಯಸಭೆಗೆ ಚುನಾವಣಾ ದಿನಾಂಕ‌ ಫಿಕ್ಸ್ ಆದ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಲಾಬಿ ಮುಂದುವರೆದಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಪರ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ‌ ಜೊಲ್ಲೆ ಬ್ಯಾಟ್‌ ಬೀಸಿದ್ದಾರೆ.

ಸಂಸದ ಅಣ್ಣಾಸಾಹೇಬ ಜೊಲ್ಲೆ
ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಪ್ರಭಾಕರ ಕೋರೆ ಅವರೇ ರಾಜ್ಯಸಭಾ ಸದಸ್ಯರಾಗಿ ಮುಂದುವರೆಯಲಿ ಎಂದರು. ರಾಜ್ಯಸಭೆಗೆ ತಮ್ಮ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡುವಂತೆ ಉಮೇಶ್​ ಕತ್ತಿ ಪಟ್ಟು‌ ಹಿಡಿದಿದ್ದಾರೆ. ಆದರೆ, ಕತ್ತಿ‌ ಸಹೋದರರಿಗೆ ತಮ್ಮ ಬೆಂಬಲ‌ ಇಲ್ಲ ಅನ್ನೋದನ್ನ ಸಂಸದ ಅಣ್ಣಾಸಾಹೇಬ ಜೊಲ್ಲೆ ಪರೋಕ್ಷವಾಗಿ ಹೇಳಿದ್ದಾರೆ.

ABOUT THE AUTHOR

...view details