ಚಿಕ್ಕೋಡಿ : ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಸಾಕಷ್ಟು ರೋಚಕತೆ ಉಂಟುಮಾಡಿದ್ದ ಚಿಕ್ಕೋಡಿ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತಗಳನ್ನು ಗಳಿಸಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿಜಯಶಾಲಿಯಾಗಿದ್ದಾರೆ.
ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸಿದ್ದ ಉದ್ಯಮಿ ಅಣ್ಣಾಸಾಹೇಬ್ ಜೊಲ್ಲೆ ಕೊನೆಸುತ್ತಿನಲ್ಲಿ ಪ್ರಕಾಶ್ ಹುಕ್ಕೇರಿ ಅವರನ್ನು ಮಣಿಸಿದರು. ಆರು ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಒಮ್ಮೆ ಸಂಸದರಾಗಿದ್ದ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದ ಪ್ರಕಾಶ್ ಹುಕ್ಕೇರಿ ಈ ಸೋಲಿನಿಂದ ಮುಖಭಂಗ ಅನುಭವಿಸಿದ್ದಾರೆ.
ಮತ ಎಣಿಕೆ ಅರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಪ್ರಕಾಶ ಹುಕ್ಕೇರಿ 20 ನೇ ಸುತ್ತಿನವರೆಗೂ ಒಂದು ಬಾರಿಯೂ ಕೂಡ ಮುನ್ನಡೆ ಸಾಧಿಸಲಿಲ್ಲ. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಅಣ್ಣಾಸಾಹೇಬ್ ಜೊಲ್ಲೆ ಅವರು 6,41,232 ಮತಗಳನ್ನ ಪಡೆದರೆ , ಪ್ರಕಾಶ್ ಹುಕ್ಕೇರಿ 5,24,871 ಮತಗಳನ್ನು ಪಡೆದುಕೊಂಡರು.
ಸೊಲಿಲ್ಲದ ಸರದಾರ ಪ್ರಕಾಶ್ ಹುಕ್ಕೇರಿ ಅವರನ್ನು 1,16,361 ಬಾರಿ ಅಂತರದ ಮತಗಳಿಂದ ಅಣ್ಣಾಸಾಹೇಬ್ ಜೊಲ್ಲೆ ಸೋಲಿಸಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಜಯ ಗಳಿಸಿದ್ದರಿಂದ ಬಿಜೆಪಿಗರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ, ಕುಣಿದಾಡಿದರು.
ವಿಧಾನಸಭಾ ಕ್ಷೇತ್ರವಾರು ದೊರೆತ ಮತಗಳು ವಿವರ
ನಿಪ್ಪಾಣಿ
- ಅಣ್ಣಾಸಾಹೇಬ ಜೊಲ್ಲೆ : 86653
- ಪ್ರಕಾಶ ಹುಕ್ಕೇರಿ : 74909
- ಬಿಜೆಪಿ ಲೀಡ್ : 11744
ಚಿಕ್ಕೋಡಿ- ಸದಲಗಾ
- ಅಣ್ಣಾಸಾಹೇಬ ಜೊಲ್ಲೆ : 76824
- ಪ್ರಕಾಶ ಹುಕ್ಕೇರಿ : 91685
- ಕಾಂಗ್ರೆಸ್ ಲೀಡ್ : 14841