ಚಿಕ್ಕೋಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಜರುಗಬೇಕಿದ್ದ ಜಾತ್ರೆಯನ್ನ ರದ್ದುಗೊಳಿಸಿ ಜಾತ್ರೆ ನಿಮಿತ್ತ ಕೊರೋನಾ ವಾರಿಯರ್ಸಗೆ ಅನ್ನ ದಾಸೋಹ ನೆರವೇರಿಸಿದ್ದಾರೆ ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ.
ಚಂದ್ರಶೇಖರ ಶಿವಾಚಾರ್ಯರಿಂದ ಕೊರೊನಾ ವಾರಿಯರ್ಸ್ಗೆ ಅನ್ನ ದಾಸೋಹ
ವಿಜೃಂಭಣೆಯಿಂದ ಜರುಗಬೇಕಿದ್ದ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜಾತ್ರೆ, ಕೊರೊನಾ ಕಾರಣದಿಂದ ರದ್ದಾಗಿದೆ. ಆದರೆ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಜಾತ್ರೆಯ ನಿಮಿತ್ತ ಕೊರೊನಾ ವಾರಿಯರ್ಸ್ಗೆ ಅನ್ನ ದಾಸೋಹ ಆಯೋಜಿಸಿದ್ದರು.
ಚಂದ್ರಶೇಖರ ಶಿವಾಚಾರ್ಯ ಶ್ರೀಗಳು
ಪ್ರತಿ ವರ್ಷ ಏಪ್ರಿಲ್ 24 ರಿಂದ ಹುಕ್ಕೇರಿ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರೆ ಬಹಳ ವಿಜೃಂಭಣೆಯಿಂಧ ಜರುಗುತ್ತಿತ್ತು. ಆದರೆ, ಈ ಬಾರಿ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಜಾತ್ರೆಯನ್ನ ರದ್ದು ಮಾಡಲಾಗಿದೆ.
ಜಾತ್ರೆ ರದ್ದಾದರೂ ಕೊರೊನಾ ವಾರಿಯರ್ಸ್ ಆದ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ನ ದಾಸೋಹ ಆಯೋಜನೆ ಮಾಡಿ ಅವರ ಪರಿಶ್ರಮಕ್ಕೆ ಶ್ರೀಗಳು ಧನ್ಯವಾದ ತಿಳಿಸಿದರು.